Saturday, June 27, 2026
Homeಕರಾವಳಿಪುತ್ತೂರು: ಅನ್ಯಕೋಮಿನ ಮಹಿಳೆಯ ಮನೆಯಲ್ಲಿ ಹಿಂದೂ ಯುವಕ:  ಪೊಲೀಸರು ಬರುತ್ತಿದ್ದಂತೆ ಹಿಂದೆ ಬಾಗಿಲಿನಿಂದ ಜೋಡಿ ಪರಾರಿ

ಪುತ್ತೂರು: ಅನ್ಯಕೋಮಿನ ಮಹಿಳೆಯ ಮನೆಯಲ್ಲಿ ಹಿಂದೂ ಯುವಕ:  ಪೊಲೀಸರು ಬರುತ್ತಿದ್ದಂತೆ ಹಿಂದೆ ಬಾಗಿಲಿನಿಂದ ಜೋಡಿ ಪರಾರಿ

- Advertisement -
- Advertisement -

ಪುತ್ತೂರು: ಇಲ್ಲಿನ ಕಬಕದಲ್ಲಿ ಅನ್ಯಕೋಮಿನ ಮಹಿಳೆಯೊಬ್ಬರ ಮನೆಯಲ್ಲಿ ಹಿಂದೂ ಯುವಕನಿದ್ದಾನೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಡಿ ಕೊನೆಗೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಬಳಿಕ ಜೋಡಿ ಪರಾರಿಯಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಕಬಕದ ಅನ್ಯಕೋಮಿನ ಮಹಿಳೆಯೊಬ್ಬರ ಮನೆಯಲ್ಲಿ ರಿಕ್ಷಾ ಚಾಲಕ ಹಿಂದೂ ಯುವಕನೊಬ್ಬನಿದ್ದಾನೆ. ಮನೆಯ ಎದುರಿನ ಬಾಗಿಲಿಗೆ ಚಿಲಕ ಹಾಕಿ ಅವರಿಬ್ಬರು ಒಳಗಿದ್ದಾರೆ ಎಂಬ ಸುದ್ದಿ ಸ್ಥಳೀಯವಾಗಿ ಹರಿದಾಡಿ ಕೊನೆಗೆ ಪೊಲೀಸರವರೆಗೆ ತಲುಪಿತ್ತು. ಮನೆಯ ಬಳಿ ನೂರಾರು ಸಂಖ್ಯೆಯಲ್ಲಿ ಜನ ಕೂಡ ಜಮಾಯಿಸಿದ್ದರು.ಕೊನೆಗೆ ಪೊಲೀಸರು ಬಂದು ಎಲ್ಲಾ ಕಡೆ ಹುಡುಕಾಡಿ ಜನರನ್ನು ಚದುರಿಸಿದ್ದಾರೆ, ಪೊಲೀಸರು ತೆರಳುತ್ತಿದ್ದಂತೆ ಮನೆಯ ಹಿಂದಿನ ಬಾಗಿಲು ತೆರೆದು ಮಹಿಳೆ ಹಾಗೂ ಯುವಕ ಪರಾರಿಯಾಗಿದ್ದಾರೆ ಅಂತಾ ಸ್ಥಳೀಯರು ಆರೋಪಿಸಿದ್ದಾರೆ. ಪೊಲೀಸರು ಹೋಗುತ್ತಿದ್ದಂತೆ ಮನೆಯ ಹಿಂದಿನ ಬಾಗಿಲು ಓಪನ್ ಆಗಿದೆ. ಮನೆಯೊಳಗೆ ಯಾರೂ ಇಲ್ಲ ಎಂದಾದರೆ ಅದು ಹೇಗೆ ಸಾಧ್ಯ ಎಂದು ಸ್ಥಳೀಯರು ಪ್ರಶ್ನಿಸುತ್ತಿದ್ದಾರೆ

- Advertisement -

Latest News

error: Content is protected !!