Tuesday, May 21, 2024
Homeಕರಾವಳಿಮಂಗಳೂರು ರೈಲು ನಿಲ್ದಾಣದ ಸೆಕೆಂಡ್ ಎಂಟ್ರಿ ಸ್ಥಳದಲ್ಲಿ ಅಪರಿಚಿತ ಶವ ಪತ್ತೆ

ಮಂಗಳೂರು ರೈಲು ನಿಲ್ದಾಣದ ಸೆಕೆಂಡ್ ಎಂಟ್ರಿ ಸ್ಥಳದಲ್ಲಿ ಅಪರಿಚಿತ ಶವ ಪತ್ತೆ

spot_img
- Advertisement -
- Advertisement -

ಮಂಗಳೂರು: ನಗರದ ಸೆಂಟ್ರಲ್ ರೈಲು ನಿಲ್ದಾಣದ ಸೆಕೆಂಡ್ ಎಂಟ್ರಿ ಸ್ಥಳದಲ್ಲಿ ಅಪರಿಚಿತ (50ವರ್ಷ) ವ್ಯಕ್ತಿಯೊಬ್ಬರ ಶವ ಪತ್ತೆಯಾಗಿದ್ದು ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಹರೆ ಇಂತಿದೆ:
5.2ಅಡಿ ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ಉದ್ದಮುಖ, ಉದ್ದಮೂಗು, ಅಗಲವಾದ ಹಣೆ ಹೊಂದಿರುತ್ತಾರೆ. 2 ಇಂಚು ಉದ್ದದ ಬಿಳಿ, ಕಪ್ಪು ಮಿಶ್ರಿತ ಕೂದಲು, ಗಡ್ಡ, ಮೀಸೆ ಇದ್ದು ಮಾಸಲು ಬಿಳಿ ಬಣ್ಣದ ಶರ್ಟ್, ಹಸಿರು ಬಣ್ಣದ ಪ್ಯಾಂಟ್ ಧರಿಸಿರುತ್ತಾರೆ.


ಈ ಚಹರೆಯುಳ್ಳ ವ್ಯಕ್ತಿಯ ಸಂಬಂಧಿಕರು ಅಥವಾ ಪರಿಚಯಸ್ಥರಿದ್ದಲ್ಲಿ ರೈಲ್ವೆ ಪೊಲೀಸ್ ಠಾಣೆಯ ದೂ. ಸಂಖ್ಯೆ: 0824-2220559, ರೈಲ್ವೆ ಪೊಲೀಸ್ ನಿಯಂತ್ರಣ ಕೊಠಡಿ ದೂ. ಸಂಖ್ಯೆ: 080-22871291, ಪೊಲೀಸ್ ನಿರೀಕ್ಷಕರ ಮೊ.ಸಂಖ್ಯೆ: 9480800470, ಪೊಲೀಸ್ ಉಪ ನಿರೀಕ್ಷಕರ ಮೊ.ಸಂಖ್ಯೆ: 9480802121 ಮೂಲಕ ಸಂಪರ್ಕಿಸುವಂತೆ ಮಂಗಳೂರು ರೈಲ್ವೆ ಪೊಲೀಸ್ ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!