Monday, April 29, 2024
Homeತಾಜಾ ಸುದ್ದಿಹಿಂದಿ ಹಿಂದುಳಿದ ರಾಜ್ಯಗಳ ಭಾಷೆ, ಇದು ಶೂದ್ರರಿಗೆ ಮಾತ್ರ ಸೀಮಿತ : ಡಿಎಂಕೆ ಸಂಸದ ಇಳಂಗೋವನ್...

ಹಿಂದಿ ಹಿಂದುಳಿದ ರಾಜ್ಯಗಳ ಭಾಷೆ, ಇದು ಶೂದ್ರರಿಗೆ ಮಾತ್ರ ಸೀಮಿತ : ಡಿಎಂಕೆ ಸಂಸದ ಇಳಂಗೋವನ್ ಹೇಳಿಕೆ

spot_img
- Advertisement -
- Advertisement -

ಚೆನ್ನೈ: ಡಿಎಂಕೆ(ದ್ರಾವಿಡ ಮುನ್ನೇತ್ರ ಕಳಗಂ) ಸಂಸದ ಟಿಕೆಎಸ್ ಇಳಂಗೋವನ್ ಭಾಷಾ ಚರ್ಚೆಯಲ್ಲಿ ಹಿಂದಿಯು ಹಿಂದುಳಿದ ರಾಜ್ಯಗಳ ಭಾಷೆ ಎಂದು ಹೇಳುವ ಮೂಲಕ ಹೊಸ ವಿವಾದವನ್ನು ಸೃಷ್ಟಿಸಿದ್ದಾರೆ. 

ಇಳಂಗೋವನ್ ಅವರು ಭಾಷಾ ವಿವಾದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡುವಾಗ, ಬಿಹಾರ, ಮಧ್ಯಪ್ರದೇಶ, ಉತ್ತರ ಪ್ರದೇಶ ಮತ್ತು ರಾಜಸ್ಥಾನದಂತಹ ಹಿಂದುಳಿದ ರಾಜ್ಯಗಳಲ್ಲಿ ಮಾತ್ರ ಹಿಂದಿ ಸ್ಥಳೀಯ ಭಾಷೆಯಾಗಿದೆ. ಹಿಂದಿ ಶೂದ್ರರಿಗೆ ಮಾತ್ರ ಎಂದು ಹೇಳುವ ಮೂಲಕ ಭಾಷೆಗೆ ಮೇಲು-ಕೀಳು ಭಾವನೆಯನ್ನು ತಂದಿದ್ದಾರೆ.

ಹಿಂದಿ ನಮ್ಮನ್ನು ಶೂದ್ರರನ್ನಾಗಿ ಪರಿವರ್ತಿಸುತ್ತದೆ. ಹಿಂದಿ ನಮಗೆ ಒಳ್ಳೆಯದಲ್ಲ ಎಂದು ಆಕ್ರೋಶ ಹೊರಹಾಕಿದರು. ಏಪ್ರಿಲ್‍ನಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ನವದೆಹಲಿಯಲ್ಲಿ ನಡೆದ ಸಂಸದೀಯ ಅಧಿಕೃತ ಭಾಷಾ ಸಮಿತಿಯ 37ನೇ ಸಭೆಯಲ್ಲಿ, ಹಿಂದಿಯನ್ನು ಇಂಗ್ಲಿಷ್‍ಗೆ ಪರ್ಯಾಯವಾಗಿ ಸ್ವೀಕರಿಸಬೇಕು. ಸ್ಥಳೀಯ ಭಾಷೆಯಾಗಿ ಅಲ್ಲ ಎಂದು ಹೇಳಿದ್ದರು ಎಂದರು.

- Advertisement -
spot_img

Latest News

error: Content is protected !!