Friday, May 3, 2024
Homeತಾಜಾ ಸುದ್ದಿಮಂಗಳೂರಿನಲ್ಲಿ ಸೋಲಾರ್ ವಿದ್ಯುತ್ ಘಟಕ ಸ್ಥಾಪನೆ: ರಾಜ್ಯ ಸರ್ಕಾರದೊಂದಿಗೆ ಹರಿಯಾಣ ಮೂಲದ ಆಕ್ಮೆ ಕಂಪನಿ ಒಪ್ಪಂದ

ಮಂಗಳೂರಿನಲ್ಲಿ ಸೋಲಾರ್ ವಿದ್ಯುತ್ ಘಟಕ ಸ್ಥಾಪನೆ: ರಾಜ್ಯ ಸರ್ಕಾರದೊಂದಿಗೆ ಹರಿಯಾಣ ಮೂಲದ ಆಕ್ಮೆ ಕಂಪನಿ ಒಪ್ಪಂದ

spot_img
- Advertisement -
- Advertisement -

ಬೆಂಗಳೂರು: ಆಕ್ಮೆ ಕ್ಲೀನ್ಟೆಕ್ ಸೊಲ್ಯೂಷನ್ ಪ್ರೈವೇಟ್ ಲಿಮಿಟೆಡ್ ಗ್ರೂಪ್ ಕಂಪೆನಿಯು ಗ್ರೀನ್ ಹೈಡ್ರೋಜನ್ ಮತ್ತು ಅಮೋನಿಯಾ ಘಟಕ ಸ್ಥಾಪನೆ ಹಾಗೂ ಪೂರಕವಾಗಿ ಮಂಗಳೂರಿನಲ್ಲಿ ಸೋಲಾರ್ ವಿದ್ಯುತ್ ಘಟಕ ಸ್ಥಾಪನೆಗೆ 52000 ಕೋಟಿ ರೂಪಾಯಿ ಹೂಡಿಕೆ ಮಾಡುವ ಕುರಿತು ಕರ್ನಾಟಕ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಬೆಂಗಳೂರಿನಲ್ಲಿ ಇಂದು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್, ಸಹಕಾರ ಸಚಿವ ಎಸ್. ಟಿ. ಸೋಮಶೇಖರ್, ಕೈಗಾರಿಕಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣ ರೆಡ್ಡಿ, ಇಲಾಖೆಯ ಆಯುಕ್ತ ರಾದ ಗುಂಜನ್ ಕೃಷ್ಣ, ಆಕ್ಮೆ ಗ್ರೂಪ್ ನ ಉಪಾಧ್ಯಕ್ಷ ಶಶಿ ಶೇಖರ್, ಕಂಪೆನಿಯ ಅಧಿಕಾರಿಗಳಾದ ಎಂ ವಿ ವಿ ಎಸ್ ರೆಡ್ಡಿ, ಅರುಣ್ ಚೋಪ್ರಾ ಉಪಸ್ಥಿತರಿದ್ದರು.

ಆಕ್ಮೆ ಕಂಪನಿಯು ಹರಿಯಾಣ ರಾಜ್ಯದ ಗುರುಗ್ರಾಮ ಮೂಲದ್ದಾಗಿದೆ.

- Advertisement -
spot_img

Latest News

error: Content is protected !!