Monday, May 13, 2024
Homeಕರಾವಳಿಉಡುಪಿಮಣಿಪಾಲ: ಹಿರಿಯ ಸಾಹಿತಿ ವೈದೇಹಿ ಅವರಿಗೆ ಸ್ವಗೃಹದಲ್ಲಿ ಗೌರವ ಡಾಕ್ಟರೇಟ್ ಪ್ರದಾನ

ಮಣಿಪಾಲ: ಹಿರಿಯ ಸಾಹಿತಿ ವೈದೇಹಿ ಅವರಿಗೆ ಸ್ವಗೃಹದಲ್ಲಿ ಗೌರವ ಡಾಕ್ಟರೇಟ್ ಪ್ರದಾನ

spot_img
- Advertisement -
- Advertisement -

ಮಣಿಪಾಲ: ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯ 12ನೇ ಘಟಿಕೋತ್ಸವದಲ್ಲಿ ಅನುಪಸ್ಥಿತರಾಗಿದ್ದ ಹಿರಿಯ ಸಾಹಿತಿ ವೈದೇಹಿ ಅವರ ಮಣಿಪಾಲ ನಿವಾಸದಲ್ಲಿ ಸೋಮವಾರ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು.

ಗೌರವ ಡಾಕ್ಟರೇಟ್ ಪದವಿ ಸ್ವೀಕರಿಸಿ ಮಾತನಾಡಿದ ಸಾಹಿತಿ ವೈದೇಹಿ ಅವರು, ನನ್ನ ಸಾಹಿತ್ಯಕ್ಕೆ ಸಂದ ಗೌರವ ಇದಾಗಿದ್ದು , ನಾನು ಈ ಮಟ್ಟಕ್ಕೆ ಬರಬೇಕಾದರೆ ನನ್ನ ಸಮಕಾಲೀನ ಸಾಹಿತಿಗಳು, ಕುಟುಂಬ ವರ್ಗದ ಪ್ರೋತ್ಸಾಹ, ಸಹಕಾರ ಬಹಳಷ್ಟಿದೆ. ನನ್ನನ್ನು ಗುರುತಿಸಿ ಗೌರವಿಸಿದ ಮಹಿಳಾ ವಿವಿಗೆ ಆಭಾರಿ ಎಂದು ಹೇಳಿದರು.ಮಹಿಳಾ ವಿವಿ ಕುಲಪತಿ ಪ್ರೊ. ಬಿ. ಕೆ. ತುಳಸಿಮಾಲಾ ಮಾತನಾಡಿ, ವೈದೇಹಿ ಕನ್ನಡ ಸಾಹಿತ್ಯ ಲೋಕಕ್ಕೆ ಸಲ್ಲಿಸಿದ ಕೊಡುಗೆ ಅಪಾರ, ಸ್ತ್ರೀವಾದಿ ಚಿಂತನೆಗಳು ಚಿರಸ್ಥಾಯಿ, ಇಂತಹ ಸಾಹಿತಿಗೆ ಸಂದ ಗೌರವ ವಿವಿಯ ಘನತೆ ಹೆಚ್ಚಿಸಿದೆ ಎಂದರು.

ವಿವಿ ಕಲಾ ನಿಕಾಯದ ಡೀನ್ ಪ್ರೊ. ಮಹೇಶ್ ಚಿಂತಾಮಣಿ ಮಾತನಾಡಿ, ಕಾಲೇಜಿನಿಂದ ಹಿಡಿದು ವಿವಿಗಳ ಪಠ್ಯಗಳಲ್ಲಿ ವೈದೇಹಿ ಸಾಹಿತ್ಯವಿದ್ದು ಮಕ್ಕಳ ಸಾಹಿತ್ಯದಿಂದ ತೊಡಗಿ ಹಲವಾರು ಸಾಹಿತ್ಯ ಪ್ರಕಾರಗಳಿಗೆ ನೀಡಿದ ಕೊಡುಗೆ ಅಮೋಘ ಎಂದು ನುಡಿದರು.ಮಹಿಳಾ ವಿವಿ ಮೌಲ್ಯಮಾಪನ ಕುಲಸಚಿವ ಪ್ರೊ. ರಮೇಶ ಕೆ., ಉಪಕುಲಸಚಿವ ಪ್ರೊ. ಅಶೋಕ್ ಕುಮಾರ್ ಸುರಪುರ, ಕಸಾಪ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಕಸಾಪಿ ಉಡುಪಿ ತಾಲೂಕು ಘಟಕದ ಅಧ್ಯಕ್ಷ ರವಿರಾಜ್ ಎಚ್. ಪಿ., ಸಾಹಿತಿ ಡಾ.ಕಾತ್ಯಾಯಿನಿ ಕುಂಜಿಬೆಟ್ಟು, ರಂಗನಟಿ ಪೂರ್ಣಿಮಾ ಸುರೇಶ್ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!