Monday, April 29, 2024
Homeಕರಾವಳಿಶಬರಿಮಲೆಯಲ್ಲಿ ಅರಾವಣ ಪ್ರಸಾದದಲ್ಲಿ ಬಳಸುವ ಬೆಲ್ಲ ವಿವಾದ...! ಅರ್ಜಿದಾರರಲ್ಲಿ 'ಹಲಾಲ್‌' ಪದದ ಅರ್ಥ...

ಶಬರಿಮಲೆಯಲ್ಲಿ ಅರಾವಣ ಪ್ರಸಾದದಲ್ಲಿ ಬಳಸುವ ಬೆಲ್ಲ ವಿವಾದ…! ಅರ್ಜಿದಾರರಲ್ಲಿ ‘ಹಲಾಲ್‌’ ಪದದ ಅರ್ಥ ಕೇಳಿದ ಹೈಕೋರ್ಟ್…!

spot_img
- Advertisement -
- Advertisement -

ತಿರುವನಂತಪುರಂ: ಶಬರಿಮಲೆಯಲ್ಲಿ ಅರಾವಣ ಮತ್ತು ಅಪ್ಪಂ ತಯಾರಿಕೆಗೆ ‘ಹಲಾಲ್ ಬೆಲ್ಲ’ವನ್ನು ಬಳಸಲಾಗಿದೆ ಎಂಬ ವರದಿಗಳು ಆಗುತ್ತಿದ್ದಂತೆ ಈ ವಿಚಾರವು ಹೈಕೋರ್ಟ್ ಮೆಟ್ಟಿಲು ಏರಿದೆ. ಹಿಂದೂ ಸಂಘಟನೆಯೊಂದು ಹಲಾಲ್‌ ಬೆಲ್ಲದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಕೇರಳ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಒಂದೆಡೆ ಹಲಾಲ್‌ ಆಹಾರದ ಗುಣಮಟ್ಟದ ಬಗ್ಗೆ ಚರ್ಚೆ ನಡೆಯುತ್ತಿರುವಾಗ, ಶಬರಿಮಲೆಯಲ್ಲಿ ಹಲಾಲ್‌ ಬೆಲ್ಲದ ಬಳಕೆಗೆ ಹಿಂದೂ ಐಕ್ಯವೇದಿ ವಿರೋಧ ವ್ಯಕ್ತಪಡಿಸಿದೆ. ಹಲಾಲ್‌ ಬೆಲ್ಲ ಬಳಕೆಗೆ ವಿರೋಧ ವ್ಯಕ್ತಪಡಿಸಿ ಮಾತನಾಡಿದ ಹಿಂದೂ ಐಕ್ಯವೇದಿ ಅಧ್ಯಕ್ಷೆ ಕೆ ಪಿ ಶಶಿಕಲಾ, “ಹಲಾಲ್‌ ಆದ ವಸ್ತುವನ್ನು ಬಳಸಿ ಪ್ರಸಾದ ತಯಾರಿ ಮಾಡುವುದು ಭಕ್ತರಿಗೆ ಹಾಗೂ ದೇವರಿಗೆ ಒಂದು ಸವಾಲು. ಈ ವಿಚಾರವಾಗಿ ದೇವಸ್ವಂ ಮಂಡಳಿ ಸ್ಪಷ್ಟಣೆಯನ್ನು ನೀಡಬೇಕು,” ಎಂದು ಆಗ್ರಹ ಮಾಡಿದ್ದಾರೆ.

ಹಲಾಲಾ ಎಂಬುವುದು ಒಂದು ಇಸ್ಲಾಮಿಕ್ ಪರಿಕಲ್ಪನೆಯಾಗಿದೆ. ಆಹಾರ ಪದಾರ್ಥ ಸೇರಿ ಯಾವುದು ನ್ಯಾಯಬದ್ಧವಾದುದು ಮತ್ತು ಅನುಮತಿಸಲಾದುದು ಎಂಬುವುದುನ್ನು ಮಾತ್ರ ಈ ಮೂಲಕ ವ್ಯಾಖ್ಯಾನ ಮಾಡಲಾಗುತ್ತದೆ. ಹಾಗಿರುವಾಗ ಈಗ ಅರ್ಜಿದಾರರು ಯಾವುದನ್ನು ಸ್ಪಷ್ಟವಾಗಿ ವಿರೋಧ ಮಾಡುತ್ತಿದ್ದಾರೆ ಎಂಬ ಬಗ್ಗೆ ಸ್ಪಷ್ಟತೆಯನ್ನು ನೀಡಬೇಕು,” ಎಂದು ಅರ್ಜಿದಾರರ ಪರವಾದ ವಕೀಲರನ್ನು ಪ್ರಶ್ನೆ ಮಾಡಿದೆ.

ಇನ್ನು ಈ ಬಗ್ಗೆ ವಿವರಿಸಿದ ನ್ಯಾಯಮೂರ್ತಿಗಳಾದ ಅನಿಲ್ ಕೆ ನರೇಂದ್ರನ್, “ಹಲಾಲ್‌ ಪರಿಕಲ್ಪನೆಯಲ್ಲಿ ಕೆಲವು ವಿಷಯವನ್ನು ನಿಷೇಧ ಮಾಡಲಾಗಿದೆ ಎಂದು ಹೇಳಲಾಗುತ್ತದೆ. ಉಳಿದ ವಸ್ತುಗಳು ಹಲಾಲ್‌ ಎಂಬುವುದು ಆಗಿರುತ್ತದೆ. ಈ ಪ್ರಮಾಣೀಕರಣದ ಪ್ರಕಾರ ಈ ನಿಷೇಧ ಮಾಡಲಾದ ವಸ್ತುಗಳು ಈ ಉತ್ಪನ್ನದಲ್ಲಿ ಇಲ್ಲ ಎಂದು ಹೇಳುತ್ತದೆ. ಈ ಪರಿಕಲ್ಪನೆ ಇಂಗ್ಲೆಂಡ್‌ನಂತಹ ದೇಶಗಳಲ್ಲಿ ಇದೆ. ಈ ಬಗ್ಗೆ ಸುಪ್ರೀಂ ಕೋರ್ಟ್‌ನ ಕೆಲವು ತೀರ್ಪುಗಳು ಉಲ್ಲೇಖ ಮಾಡಿದೆ,” ಎಂದು ತಿಳಿಸಿದರು.

- Advertisement -
spot_img

Latest News

error: Content is protected !!