Wednesday, May 8, 2024
Homeತಾಜಾ ಸುದ್ದಿಬಿಸಿಲಿನಿಂದ ತತ್ತರಿಸಿರುವ ಜನತೆಗೆ ಮತ್ತೊಂದು ಶಾಕಿಂಗ್ ಸುದ್ದಿ ಕೊಟ್ಟ ಹವಾಮಾನ ಇಲಾಖೆ

ಬಿಸಿಲಿನಿಂದ ತತ್ತರಿಸಿರುವ ಜನತೆಗೆ ಮತ್ತೊಂದು ಶಾಕಿಂಗ್ ಸುದ್ದಿ ಕೊಟ್ಟ ಹವಾಮಾನ ಇಲಾಖೆ

spot_img
- Advertisement -
- Advertisement -

ಬೆಂಗಳೂರು : ಬಿಸಿಲಿನಿಂದ ತತ್ತರಿಸಿರುವ ಜನತೆಗೆ ಹವಾಮಾನ ಇಲಾಖೆ ಮತ್ತೊಂದು ಶಾಕ್ ನೀಡಿದೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ತಾಪಾಮಾನ ಭಾರೀ ಹೆಚ್ಚಳವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉತ್ತರದಿಂದ ದಕ್ಷಿಣದತ್ತ ಬಿಸಿ ಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವಾಡಿಕೆಗಿಂತ ತಾಪಮಾನ ಹೆಚ್ಚಲವಾಗಿದೆ. ಕಲಬುರಗಿಯಲ್ಲಿ ಬುಧವಾರ ಗರಿಷ್ಠ ತಾಪಮಾನ 41.6 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ರಾಯಚೂರು 39.4, ವಿಜಯಪುರ 37.9, ಗದಗ 38.4, ಬೆಂಗಳೂರು 35.0, ಬೆಳಗಾವಿ 36.5 ಬಳ್ಳಾರಿ 39.4 ಉಷ್ಣಾಂಶ ದಾಖಲಾಗಿದೆ. ಈ ಮೂಲಕ ಬಿಸಿಲಿನ ಬೇಗೆಗೆ ರಾಜ್ಯದ ಜನರು ತತ್ತರಿಸಿದ್ದಾರೆ.

ಈ ಬಾರಿ ವಾಡಿಕೆಗಿಂತ ಮುನ್ನ ಬೇಸಿಗೆ ಶುರುವಾಗಿದ್ದು, ಮೂರು ತಿಂಗಳು ಇರುತ್ತಿದ್ದ ಬೇಸಿಗೆ ಈ ವರ್ಷ 4 ತಿಂಗಳ ಕಾಲ ಇರಲಿದೆ. ಕಳೆದ ನವೆಂಬರ್ ನಲ್ಲಿ ಹೆಚ್ಚು ಮಳೆಯಾದ ಹಿನ್ನೆಲೆಯಲ್ಲಿ ಚಳಿಗಾಲದ ಅವಧಿ ಇಳಿಮುಖವಾಗಿತ್ತು. ಈ ಹಿನ್ನೆಲೆಯಲ್ಲಿ ವಾಡಿಕೆಗಿಂತ ಮುನ್ನ ಬೇಸಿಗೆ ಆರಂಭವಾಗಿದೆ.

- Advertisement -
spot_img

Latest News

error: Content is protected !!