Sunday, June 7, 2026
Homeಕರಾವಳಿಪದ್ಮಶ್ರೀ ಹರೇಕಳ ಹಾಜಬ್ಬರಿಗೆ ಬೆಂಗಳೂರಿನಲ್ಲಿ ಸನ್ಮಾನ

ಪದ್ಮಶ್ರೀ ಹರೇಕಳ ಹಾಜಬ್ಬರಿಗೆ ಬೆಂಗಳೂರಿನಲ್ಲಿ ಸನ್ಮಾನ

- Advertisement -
- Advertisement -

ಬೆಂಗಳೂರು: ಬೆಂಗಳೂರಿನಲ್ಲಿ ಇಂದು ಪದ್ಮಶ್ರೀ ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು. ‌

ಮಲ್ಲೇಶ್ವರಂನಲ್ಲಿ ನಡೆದ ಕನ್ನಡೋತ್ಸವ ಸಮಾರಂಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವಥ್ ನಾರಾಯಣ ಮತ್ತು ಕೃಷ್ಣದತ್ತ ಯದುವೀರ ಚಾಮರಾಜ ಒಡೆಯರ್ ಹಾಜಬ್ಬ ಅವರನ್ನು ಸನ್ಮಾನಿಸಿದರು.‌

ಮಲ್ಲೇಶ್ವರಂನಲ್ಲಿರುವ ಬಿಎಚ್ಇಎಲ್ ಕೈಗಾರಿಕೆಯ ಇ.ಪಿ.ಡಿ. ವಿಭಾಗದ ಕರ್ನಾಟಕ ಸಂಘವು ಬುಧವಾರ ಆಯೋಜಿಸಿದ್ದ ಕನ್ನಡೋತ್ಸವದಲ್ಲಿ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ರಾಜ್ಯಸಭಾ ಸದಸ್ಯ ಡಾ.‌ ಎಲ್. ಹನುಮಂತಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ, ಜನಪದ ಗಾಯಕ ಮಳವಳ್ಳಿ ಮಹದೇವಸ್ವಾಮಿ, ಬಿಎಚ್ಇಎಲ್ ಉನ್ನತಾಧಿಕಾರಿ ಎಸ್.ಎನ್.ಭಾಗ್ಯಶ್ರೀ, ಸಂಘದ ಉಪಾಧ್ಯಕ್ಷ ಟಿ. ತಿಮ್ಮೇಶ್ ಮುಂತಾದವರು ಉಪಸ್ಥಿತರಿದ್ದರು.

- Advertisement -

Latest News

error: Content is protected !!