Saturday, May 11, 2024
Homeತಾಜಾ ಸುದ್ದಿಜೋಶಿ ಮಠ ಭಾಗದಲ್ಲಿ ಭಾರಿ ಹಿಮಪಾತ- ಪ್ರವಾಹ ಭೀತಿಯಲ್ಲಿರುವ ಜಿಲ್ಲೆ ಯಾವುದು ಗೊತ್ತಾ?

ಜೋಶಿ ಮಠ ಭಾಗದಲ್ಲಿ ಭಾರಿ ಹಿಮಪಾತ- ಪ್ರವಾಹ ಭೀತಿಯಲ್ಲಿರುವ ಜಿಲ್ಲೆ ಯಾವುದು ಗೊತ್ತಾ?

spot_img
- Advertisement -
- Advertisement -

ಚಮೋಲಿ: ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿ ಮಠ ಭಾಗದ ಹಿಮಪರ್ವತಗಳಲ್ಲಿ ಭಾರಿ ಹಿಮಪಾತ ಸಂಭವಿಸಿದ್ದು ಭಯದ ವಾತಾವರಣ ನಿರ್ಮಾಣ ವಾಗಿದೆ. ಈ ಪ್ರದೇಶದಲ್ಲಿ ಹರಿಯುವ ನದಿಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ.ಧೌಲಿಗಂಗಾ ನದಿಯ ನೀರಿನ ಮಟ್ಟ ಹೆಚ್ಚಾಗಿ ಪ್ರವಾಹ ಉಂಟಾಗಿದೆ.ಪರಿಣಾಮ ಅನೇಕ ಮನೆಗಳು ಕೊಚ್ಚಿಕೊಂಡು ಹೋಗಿದ್ದು, 150 ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಈಗಾಗಲೇ ದೌಲಿಗಂಗಾ ನದಿ ನೀರಿನ ಮಟ್ಟದ ಅಪಾಯದ ಮೀರಿ ಹರಿಯುತ್ತಿದೆ.ಭಾರಿ ಹಿಮಪಾತದಿಂದಾಗಿ ಋಷಿಗಂಗಾ ವಿದ್ಯುತ್ ಯೋಜನೆಗೂ ಹಾನಿಯಾಗಿದೆ ಎಂದು ಎಎನ್‌ಐ ವರದಿ ಮಾಡಿದೆ. ಈಗಾಗಲೇ ದೌಲಿಗಂಗಾ ನದಿ ಪ್ರದೇಶದಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ತೆರಳಲು ಜಿಲ್ಲಾಡಳಿತ ಸೂಚಿಸಿದೆ.

- Advertisement -
spot_img

Latest News

error: Content is protected !!