Thursday, June 4, 2026
Homeಕರಾವಳಿಉಡುಪಿಉಡುಪಿ; ಪರೀಕ್ಷೆ ಚೆನ್ನಾಗಿ ಮಾಡಿಲ್ಲವೆಂದು ಬೇಸರ; ಹಾಸ್ಟೆಲ್ ರೂಂನಲ್ಲಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

ಉಡುಪಿ; ಪರೀಕ್ಷೆ ಚೆನ್ನಾಗಿ ಮಾಡಿಲ್ಲವೆಂದು ಬೇಸರ; ಹಾಸ್ಟೆಲ್ ರೂಂನಲ್ಲಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

- Advertisement -
- Advertisement -

ಉಡುಪಿ; ಪರೀಕ್ಷೆ ಚೆನ್ನಾಗಿ ಮಾಡಿಲ್ಲವೆಂದು ಬೇಸರದಿದ ಹಾಸ್ಟೆಲ್ ರೂಂನಲ್ಲಿ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಣಿಪಾಲದಲ್ಲಿ ನಡೆದಿದೆ.

ಮಣಿಪಾಲದ ವಾಗ್ಷಾದಲ್ಲಿ ಮೂರನೇ ವರ್ಷ ಬಿಎ (ಕಲ್ನರಿ ಆರ್ಟ್ಸ್) ವಿದ್ಯಾರ್ಥಿಯಾಗಿರುವ ಬೆಂಗಳೂರಿನ ಹಿತೇಂದ್ರ (26) ಮೃತ ದುರ್ದೈವಿ. ಹಿತೇಂದ್ರ ಮೇ 8ರಿಂದ 10ನೇ ತಾರೀಕಿನ ನಡುವಿನ ಅವಧಿಯಲ್ಲಿ ತಾನು ವಾಸವಾಗಿದ್ದ ಹಾಸ್ಟೆಲ್ ರೂಮಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದ್ದು ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ.

ಮೂರು ದಿನಗಳ ಹಿಂದೆ ತಾಯಿಗೆ ಕರೆ ಮಾಡಿದ್ದ ಹಿತೇಂದ್ರ, ಪರೀಕ್ಷೆಯನ್ನು ಚೆನ್ನಾಗಿ ಮಾಡದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದ. ತಾಯಿ ಧೈರ್ಯ ತುಂಬಿದ ಬಳಿಕ ಮುಂದೆ ಸರಿ ಮಾಡುತ್ತೇನೆ ಎಂದು ಭರವಸೆ ನೀಡಿದ್ದ ಎಂದು ಹಿತೇಂದ್ರ ತಂದೆ ಲಕ್ಷ್ಮೀನರಸಿಂಹ ತಿಳಿಸಿದ್ದಾರೆ.ಮೇ 10ರ ರಾತ್ರಿ 8:45ರ ಸುಮಾರಿಗೆ ಕಾಲೇಜಿನ ಉಪಪ್ರಾಂಶುಪಾಲರು ತನಗೆ ಕರೆ ಮಾಡಿ ಘಟನೆಯ ಬಗ್ಗೆ ತಿಳಿಸಿದ್ದು, ಇಂದು ಬೆಳಗ್ಗೆ ಬಂದು ರೂಮಿನ ಬಾಗಿಲು ತೆಗೆದುನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಕಂಡು ಬಂದಿದ್ದ ಎಂದಿದ್ದಾರೆ.ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!