Thursday, June 25, 2026
Homeತಾಜಾ ಸುದ್ದಿಬಾದಾಮಿಯಲ್ಲಿ ಭಾರೀ ಅಗ್ನಿದುರಂತ!.. ಸುಟ್ಟು ಕರಕಲಾದ ಅಂಗಡಿಗಳು

ಬಾದಾಮಿಯಲ್ಲಿ ಭಾರೀ ಅಗ್ನಿದುರಂತ!.. ಸುಟ್ಟು ಕರಕಲಾದ ಅಂಗಡಿಗಳು

- Advertisement -
- Advertisement -

ಬಾಗಲಕೋಟೆ: ಇಲ್ಲಿನ ಬಾದಾಮಿ ಪಟ್ಟಣದಲ್ಲಿ ಇಂದು ನಸುಕಿನ ವೇಳೆ ಭಾರಿ ಅಗ್ನಿದುರಂತ ಸಂಭವಿಸಿದೆ.ದುರಂತದಲ್ಲಿ ಬೈಕ್ ಗ್ಯಾರೇಜ್​, ಫರ್ನಿಚರ್ ಅಂಗಡಿ, ಹೋಟೆಲ್​ಗಳು ಸುಟ್ಟುಭಸ್ಮವಾಗಿವೆ. ನಸುಕಿನ ಮೂರು ಗಂಟೆ ಸುಮಾರಿಗೆ ಅಗ್ನಿ ದುರಂತ ಸಂಭವಿಸಿದ್ದು ಜನರ ಓಡಾಟ ಇಲ್ಲದ ಕಾರಣ ಪ್ರಾಣಹಾನಿಯಾಗಿಲ್ಲ.

ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ್ದು, ಈ ದುರಂತ ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಸಂಭವಿಸಿರಬಹುದು ಎಂದು ಅಂದಾಜಿಸಲಾಗಿದೆ. ಅಗ್ನಿ ಶಾಮಕ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಆಗಮಿಸಿದ್ದು, ಬೆಂಕಿ ನಂದಿಸಿದ್ದಾರೆ. ದುರಂತದಲ್ಲಿ ಅಲ್ಲಾಭಕ್ಷ ಹೆಬ್ಬಳ್ಳಿ ಎಂಬುವರ ಬೈಕ್ ಗ್ಯಾರೇಜ್, ಹೂವಪ್ಪ ಕಲಾಲ ಅವರಿಗೆ ಸೇರಿದ ಹೋಟೆಲ್, ಭೀಮಸಿ ಬಡಿಗೇರ ಎಂಬುವರಿಗೆ ಸೇರಿದ ಫರ್ನೀಚರ್ ಅಂಗಡಿ ಸಂಪೂರ್ಣ ಸುಟ್ಟುಹೋಗಿವೆ.

- Advertisement -

Latest News

error: Content is protected !!