Thursday, June 25, 2026
Homeಕರಾವಳಿಹಿರಿಯ ಪತ್ರಕರ್ತ ಸೂರ್ಯನಾರಾಯಣ ಪೂವಳ ಇನ್ನಿಲ್ಲ

ಹಿರಿಯ ಪತ್ರಕರ್ತ ಸೂರ್ಯನಾರಾಯಣ ಪೂವಳ ಇನ್ನಿಲ್ಲ

- Advertisement -
- Advertisement -

ಕಲ್ಲಡ್ಕ: ಇಲ್ಲಿನ ಅಮ್ಟೂರಿನ ಹಿರಿಯ ಪತ್ರಕರ್ತ ಸೂರ್ಯನಾರಾಯಣ ಪೂವಳ (51) ಇಂದು ಬೆಳಗ್ಗೆ ಕಲ್ಲಡ್ಕ ಸಮೀಪದ ಅಮ್ಟೂರಿನ ತಮ್ಮ ಮನೆಯಲ್ಲಿ ನಿಧನ ಹೊಂದಿದ್ದಾರೆ. ಅನಾರೋಗ್ಯದ ಕಾರಣಕ್ಕೆ ಇವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೂರ್ಯನಾರಾಯಣ ಪೂವಳ ಅವರು ನಿನ್ನೆಯಷ್ಟೇ ಮನೆಗೆ ಹಿಂತಿರುಗಿದ್ದರು.ಪತ್ರಕರ್ತರಾಗಿ ಸುಮಾರು 25 ವರ್ಷಗಳ ಕಾಲ ಮುಂಗಾರು ಪತ್ರಿಕೆ, ಕರಾವಳಿ ಅಲೆ ಸೇರಿದಂತೆ ಹಲವು ಪತ್ರಿಕೆಗಳಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ, ತಾಯಿ, ಸಹೋದರರು, ಸಹೋದರಿಯನ್ನು ಅಗಲಿದ್ದಾರೆ.

- Advertisement -

Latest News

error: Content is protected !!