Thursday, June 4, 2026
Homeತಾಜಾ ಸುದ್ದಿವಿಶಾಖಪಟ್ಟಣ ಅನಿಲ ಸೋರಿಕೆ ಪ್ರಕರಣ: ಬೆಚ್ಚಿಬೀಳಿಸುವಂತಿದೆ ಸ್ಥಳದಲ್ಲಿನ ಪರಿಸ್ಥಿತಿ

ವಿಶಾಖಪಟ್ಟಣ ಅನಿಲ ಸೋರಿಕೆ ಪ್ರಕರಣ: ಬೆಚ್ಚಿಬೀಳಿಸುವಂತಿದೆ ಸ್ಥಳದಲ್ಲಿನ ಪರಿಸ್ಥಿತಿ

- Advertisement -
- Advertisement -

ಆಂಧ್ರಪ್ರದೇಶದ ವೈಜಾಗ್ ನಲ್ಲಿ ರಾಸಾಯನಿಕ ಸ್ಥಾವರದಿಂದ ಇಂದು ಬೆಳಿಗ್ಗೆ ಅನಿಲ ಸೋರಿಕೆಯಾಗಿದ್ದು, ಈಗಾಗಲೇ ಎಂಟು ಮಂದಿ ಸಾವನ್ನಪ್ಪಿದ್ದಾರೆ. ಹಲವಾರು ಮಂದಿ ಅಸ್ವಸ್ಥರಾಗಿದ್ದು, ಅವರುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅನಿಲ ಸೋರಿಕೆ ಪರಿಣಾಮ ಹಲವಾರು ಮಂದಿ ರಸ್ತೆಗಳಲ್ಲೇ ಪ್ರಜ್ಞಾಹೀನರಾಗಿ ಬಿದ್ದಿದ್ದು, ಬಳಿಕ ಅವರುಗಳನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಜಾನುವಾರುಗಳೂ ಸಹ ಅಲ್ಲಲ್ಲೇ ಪ್ರಜ್ಞೆ ತಪ್ಪಿದ್ದು, ಸ್ಥಳದಲ್ಲಿನ ಪರಿಸ್ಥಿತಿ ಬೆಚ್ಚಿಬೀಳಿಸುವಂತಿದೆ. ಅನಿಲ ಮೂರು ಕಿ.ಮೀ. ವ್ಯಾಪಿಸಿದೆ ಎನ್ನಲಾಗಿದ್ದು, ಹೀಗಾಗಿ ಆತಂಕ ಮನೆ ಮಾಡಿದೆ. ರಕ್ಷಣಾ ಕಾರ್ಯ ಚುರುಕಿನಿಂದ ಸಾಗಿದ್ದು, ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ.

- Advertisement -

Latest News

error: Content is protected !!