Thursday, June 4, 2026
Homeತಾಜಾ ಸುದ್ದಿನಾನು ಬೆನ್ನಿಗೆ ಚೂರಿ ಹಾಕಿಸಿಕೊಂಡಾಗಿದೆ: ಅವ್ರಿಬ್ರಲ್ಲಿ ಯಾರು ಯಾರ ಬೆನ್ನಿಗೆ ಚೂರಿ ಹಾಕ್ತಾರೋ? ಡಿಕೆಶಿ-ಸಿದ್ದು ಒಗ್ಗಟ್ಟಿಗೆ...

ನಾನು ಬೆನ್ನಿಗೆ ಚೂರಿ ಹಾಕಿಸಿಕೊಂಡಾಗಿದೆ: ಅವ್ರಿಬ್ರಲ್ಲಿ ಯಾರು ಯಾರ ಬೆನ್ನಿಗೆ ಚೂರಿ ಹಾಕ್ತಾರೋ? ಡಿಕೆಶಿ-ಸಿದ್ದು ಒಗ್ಗಟ್ಟಿಗೆ ಹೆಚ್‌ಡಿಕೆ ವ್ಯಂಗ್ಯ

- Advertisement -
- Advertisement -

ರಾಮನಗರ: ‘ನಾನು ಕೈ ಎತ್ತಿಸಿಕೊಂಡು ಬೆನ್ನಿಗೆ ಚೂರಿ ಹಾಕಿಸಿಕೊಂಡಾಗಿದೆ. ಅದೇ ರೀತಿ ಇಬ್ಬರು ಕೈ ಎತ್ತಿ ಜನರಿಗೆ ತೋರಿಸಿದ್ದಾರೆ. ಯಾರು ಯಾರ ಬೆನ್ನಿಗೆ ಚೂರಿ ಹಾಕುತ್ತಾರೆ ಅಂತ ಮುಂದೆ ನೋಡೋಣ’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯ ಜನ್ಮದಿನಾಚರಣೆ ಕಾರ್ಯಕ್ರಮದ ವೇದಿಕೆಯಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಜೊತೆಯಾಗಿ ಕೈಎತ್ತಿ ಒಗ್ಗಟ್ಟು ಪ್ರದರ್ಶಿಸಿದ ಕುರಿತು ಚನ್ನಪಟ್ಟಣದಲ್ಲಿ ಗುರುವಾರ ಪತ್ರಕರ್ತರಿಗೆ ಅವರು ಪ್ರತಿಕ್ರಿಯೆ ನೀಡಿದರು. ಕೈ ಎತ್ತುವುದು, ಕೈ ಇಳಿಸುವುದು ಸಂದರ್ಭಕ್ಕೆ ತಕ್ಕಂತೆ ನಡೆಯುತ್ತವೆ. ಮುಂದೆ ನೋಡೋಣ ಎಂದರು.

- Advertisement -

Latest News

error: Content is protected !!