Wednesday, June 3, 2026
Homeಕರಾವಳಿಶಿರಾಢಿಘಾಟ್ ನಲ್ಲಿ ರಾತ್ರಿ ವೇಳೆಯೂ ವಾಹನ ಸಂಚಾರಕ್ಕೆ ಅವಕಾಶ

ಶಿರಾಢಿಘಾಟ್ ನಲ್ಲಿ ರಾತ್ರಿ ವೇಳೆಯೂ ವಾಹನ ಸಂಚಾರಕ್ಕೆ ಅವಕಾಶ

- Advertisement -
- Advertisement -

ಹಾಸನ: ಭಾರಿ ಮಳೆಯಿಂದ ಮಡಿಕೇರಿ-ಸಂಪಾಜೆ‌ ನಡುವಿನ ಕೊಯನಾಡು ಸಮೀಪ ರಸ್ತೆ ಬಿರುಕುಬಿಟ್ಟ ಹಿನ್ನೆಲೆ ಶಿರಾಡಿಘಾಟ್ ರಸ್ತೆಯಲ್ಲಿ ರಾತ್ರಿವೇಳೆ ಕೂಡ ವಾಹನಗಳ ಸಂಚಾರಕ್ಕೆ ಅವಕಾಶ ನೀಡಿ ಆದೇಶ ಮಾಡಲಾಗಿದೆ.

ಸಾರಿಗೆ ಬಸ್‌ಗಳು, ಖಾಸಗಿ ಬಸ್‌ಗಳು ಓಡಾಡಲು ಅನುಮತಿ ನೀಡಿ ಹಾಸನ ಜಿಲ್ಲಾಧಿಕಾರಿ ಆರ್.ಗಿರೀಶ್ ಆದೇಶ ನೀಡಿದ್ದಾರೆ.

ಸಕಲೇಶಪುರ ತಾಲೂಕಿನ, ದೋಣಿಗಲ್ ಬಳಿ ಭೂಕುಸಿತವಾಗಿದ್ದರಿಂದ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು. ಸಂಜೆ 6 ಗಂಟೆಯಿಂದ ಬೆ.6 ಗಂಟೆಯವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿತ್ತು.ಇಂದಿನಿಂದ ರಾತ್ರಿ ವೇಳೆ ಸಹ ವಾಹನಗಳ ಓಡಾಟಕ್ಕೆ ಅನುಮತಿ ನೀಡಲಾಗಿದೆ.

- Advertisement -

Latest News

error: Content is protected !!