Thursday, June 4, 2026
Homeತಾಜಾ ಸುದ್ದಿಮಡಿಕೇರಿ ರೆಸಾರ್ಟ್ಸ್ ನಲ್ಲಿ ವಿಶ್ರಾಂತಿ ಪಡೆಯುತ್ತಿರುವ ಕುಮಾರಸ್ವಾಮಿ ಕುಟುಂಬ

ಮಡಿಕೇರಿ ರೆಸಾರ್ಟ್ಸ್ ನಲ್ಲಿ ವಿಶ್ರಾಂತಿ ಪಡೆಯುತ್ತಿರುವ ಕುಮಾರಸ್ವಾಮಿ ಕುಟುಂಬ

- Advertisement -
- Advertisement -

ಮಡಿಕೇರಿ, ಜೂನ್,12: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರ ಸ್ವಾಮಿ ಮತ್ತವರ ಕುಟುಂಬ ಮೂರು ದಿನಗಳ ಕಾಲ ವಿಶ್ರಾಂತಿಗಾಗಿ ಮಡಿಕೇರಿ ಹೊರ ವಲಯದಲ್ಲಿರುವ ರೆಸಾರ್ಟ್ ಗೆ ಆಗಮಿಸಿದೆ.

ಇದೊಂದು ಖಾಸಗಿ ಭೇಟಿಯಾಗಿದ್ದು, ಹೆಚ್‍ಡಿಕೆ, ಪತ್ನಿ ಅನಿತಾ ಕುಮಾರಸ್ವಾಮಿ, ನಿಖಿಲ್ ಕುಮಾರಸ್ವಾಮಿ ದಂಪತಿ ಹಾಗೂ ಕುಮಾರಸ್ವಾಮಿ ಸಹೋದರಿಯರು ಸೇರಿದಂತೆ ಒಟ್ಟು ಅವರ ಕುಟುಂಬದ ಹತ್ತು ಜನರು ರೆಸ್ಸಾರ್ಟ್ಸ್ ಗೆ ಆಗಮಿಸಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಅವರು ಮದುವೆ ಅದ ಬಳಿಕ ಇದೇ ಮೊದಲ ಬಾರಿಗೆ ಕುಟುಂಬ ಸದಸ್ಯರೊಂದಿಗೆ ಇಲ್ಲಿಗೆ ಬಂದಿದ್ದಾರೆ.

ನಿಖಿಲ್ ಅವರ ಮದುವೆ ನಂತರ ಒಟ್ಟಾಗಿ ಹೆಚ್ ಡಿ ಕುಮಾರಸ್ವಾಮಿ ಅವರ ಕುಟುಂಬ ಕೊರೊನ ಸೋಂಕಿನ ಹಿನ್ನೆಲೆಯಲ್ಲಿ ಹೇರಲಾದ ಲಾಕ್ ಡೌನ್ ನಿಂದಾಗಿ ಎಲ್ಲಿಯೂ ಪ್ರವಾಸ ಹೋಗಿರಲಿಲ್ಲ.
ಇದೀಗ ಲಾಕ್ ಡೌನ್ ಸಡಿಲಿಕೆಯಾಗಿರುವುದರಿಂದ ಇಂದಿನಿಂದ 3 ದಿನಗಳವರೆಗೆ ವಿಶ್ರಾಂತಿ ಪಡೆಯಲು ಇಲ್ಲಿಗೆ ಬಂದಿದ್ದಾರೆ.

- Advertisement -

Latest News

error: Content is protected !!