Tuesday, May 7, 2024
Homeಕರಾವಳಿಬಾಂಬೆ ಹೈಕೋರ್ಟ್ ನ ನಿವೃತ್ತ ನ್ಯಾಯಧೀಶ, ಸುರತ್ಕಲ್ ಮೂಲದ ಹೊಸಬೆಟ್ಟು ಸುರೇಶ್ ನಿಧನ

ಬಾಂಬೆ ಹೈಕೋರ್ಟ್ ನ ನಿವೃತ್ತ ನ್ಯಾಯಧೀಶ, ಸುರತ್ಕಲ್ ಮೂಲದ ಹೊಸಬೆಟ್ಟು ಸುರೇಶ್ ನಿಧನ

spot_img
- Advertisement -
- Advertisement -

ಮುಂಬೈ : ಮಾನವ ಹಕ್ಕುಗಳಿಗಾಗಿ ಉಗ್ರ ಹೋರಾಟಗಾರನೆಂದೇ ಖ್ಯಾತರಾದ ಬಾಂಬೆ ಹೈಕೋರ್ಟ್‌ನ ನಿವೃತ್ತ ನ್ಯಾಯಾಧೀಶರಾದ ಹೊಸಬೆಟ್ಟು ಸುರೇಶ್ (90) ನಿಧನರಾಗಿದ್ದಾರೆ. ನ್ಯಾಯಮೂರ್ತಿ ಸುರೇಶ್ ಅವರು ಮಾನವ ಹಕ್ಕುಗಳ ಉಲ್ಲಂಘನೆ ಬಗ್ಗೆ ತನಿಖೆ ನಡೆಸುವ ಹಲವಾರು ಆಯೋಗಗಳ ನೇತೃತ್ವ ವಹಿಸಿದ್ದರು.

ಸುರತ್ಕಲ್ ವಿದ್ಯಾದಾಯಿನಿ ಪ್ರಾಥಮಿಕ ಶಾಲೆಯ ಹಳೆ ವಿದ್ಯಾರ್ಥಿಯಾಗಿದ್ದ ಅವರು, ಪ್ರತಿ ವರ್ಷ ತಮ್ಮ ಹಿರಿಯರ ಮನೆಗೆ ಆಗಮಿಸುವ ಸಂದರ್ಭ ಸುರತ್ಕಲ್‌ನ ವಿದ್ಯಾದಾಯಿನಿ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡುತ್ತಿದ್ದರು.

ಸುರತ್ಕಲ್ ಹೊಸಬೆಟ್ಟುವಿನಲ್ಲಿ 1929ರ ಜುಲೈ 29ರಂದು ಜನಿಸಿದ್ದ ಹೊಸಬೆಟ್ಟು ಸುರೇಶ್ 1953ರಲ್ಲಿ ಮುಂಬೈ ಹೈಕೋರ್ಟ್‌ನಲ್ಲಿ ನ್ಯಾಯವಾದಿಯಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದವರು. ಮಂಗಳೂರು ನಲ್ಲಿ ಬಿಎ ಪದವಿ ಮತ್ತು ಬೆಳಗಾಂನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದಲ್ಲಿ ಎಂಎ ಪದವಿ ಪಡೆದು ಮುಂಬೈ ವಿಶ್ವವಿದ್ಯಾನಿಲಯದಲ್ಲಿ ಎಲ್‌ಎಲ್‌ಎಂ ಪದವಿ ಪಡೆದವರು.

1968ರಲ್ಲಿ ಗ್ರೇಟರ್ ಬಾಂಬೆ ಸಿಟಿ ಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. 1979ರಲ್ಲಿ ದ್ವಿತೀಯ ಹೆಚ್ಚುವರಿ ಪ್ರಧಾನ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. 1980ರ ಜೂನ್ 23ರಂದು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ ಅವರು ಬಳಿಕ ಬಾಂಬೆ ಹೈಕೋರ್ಟ್ ನಲ್ಲಿ ನ್ಯಾಯವಾದಿಯಾಗಿ ಪ್ರಾಕ್ಟೀಸು ಆರಂಭಿಸಿ, 1982ರಲ್ಲಿ ಹೈಕೋರ್ಟ್‌ನ ಹಿರಿಯ ನ್ಯಾಯವಾದಿಯಾಗಿ ಪದೋನ್ನತಿ ಪಡೆದಿದ್ದರು. 1986ರ ನವೆಂಬರ್ 21ರಂದು ಬಾಂಬೆ ಹೈಕೋಟ್‌ನ ಹೆಚ್ಚುವರಿ ನ್ಯಾಯಾಧೀಶರಾಗಿ, 1987ರ ಜೂನ್ 12ರಂದು ಬಾಂಬೆ ಹೈಕೋರ್ಟ್‌ನ ಖಾಯಂ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. 1991ರ ಜುಲೈ 19ರಂದು ಅವರು ಹೈಕೋರ್ಟ್ ನಿಂದ ವೃತ್ತಿ ನಿವೃತ್ತಿ ಪಡೆದಿದ್ದರು.

ನ್ಯಾಯಮೂರ್ತಿ ಸುರೇಶ್ ಅವರು ನ್ಯಾಯಮೂರ್ತಿ ತಿವಾಟಿಯಾ ಅವರೊಡನೆ 1991ರ ಡಿಸೆಂಬರ್‌ನಲ್ಲಿ ಬೆಂಗಳೂರಿನಲ್ಲಿ ನಡೆದ ಕಾವೇರಿ ಗಲಭೆಗಳ ತನಿಖೆಗಾಗಿನ ಸಮಿತಿಯಲ್ಲಿ ಕೆಲಸ ಮಾಡಿದ್ದರು.1992 ರ ಡಿಸೆಂಬರ್ ಮತ್ತು 1993 ರ ಜನವರಿಯಲ್ಲಿ ಬಾಂಬೆಯಲ್ಲಿ ನಡೆದ ಬಾಬರಿ ಮಸೀದಿ ಧ್ವಂಸ ಗಲಭೆಗಳ ಬಗ್ಗೆ ತನಿಖೆ ನಡೆಸಲು ನ್ಯಾಯಮೂರ್ತಿ ಸುರೇಶ್ ಮತ್ತು ಸಿರಾಜ್ ಮೆಹ್ಫುಜ್ ದೌದ್ ಅವರನ್ನು ಭಾರತೀಯ ಮಾನವ ಹಕ್ಕುಗಳ ಆಯೋಗ ನೇಮಕ ಮಾಡಿತು. ಅವರು 1993 ರ ದಿ ಪೀಪಲ್ಸ್ ವರ್ಡಿಕ್ಟ್ ಎಂಬ ವರದಿಯಲ್ಲಿ ಪೊಲೀಸ್, ಸರ್ಕಾರ ಮತ್ತು ರಾಜಕೀಯ ಮುಖಂಡರನ್ನು ದೋಷಾರೋಪಣೆ ಮಾಡಿದ್ದರು.

2002ರ ಗುಜರಾತ್ ಗಲಭೆ ತನಿಖೆಗಾಗಿ ರಚಿಸಲಾದ ಭಾರತದ ಮಾಜಿ ಸುಪ್ರೀಂ ಕೋರ್ಟ್ ನ್ಯಾಯಾಧೀಶ ವಿ. ಆರ್. ಕೃಷ್ಣ ಅಯ್ಯರ್ ನೇತೃತ್ವದ ಭಾರತೀಯ ಪೀಪಲ್ಸ್ ಟ್ರಿಬ್ಯೂನಲ್ (ಐಪಿಟಿ) ಸತ್ಯ ಶೋಧನಾ ತಂಡದ ಸದಸ್ಯರೂ ಆಗಿದ್ದ ಸುರೇಶ್ , 2,094 ಮೌಖಿಕ ಮತ್ತು ಲಿಖಿತ ಸಾಕ್ಷ್ಯಗಳನ್ನು ಸಂಗ್ರಹಿಸಿ ಅನೇಕ ಹಿರಿಯ ಪೊಲೀಸ್ ಅಧಿಕಾರಿಗಳು ಮತ್ತು ಸರ್ಕಾರಿ ಅಧಿಕಾರಿಗಳನ್ನು ಭೇಟಿ ಮಾಡಿದ್ದರು. ಕ್ರೈಂ ಎಗನಿಸ್ಟ್ ಹ್ಯುಮಾನಿಟಿ ಎಂಬ ವರದಿಯಲ್ಲಿ ಅವರ ಸಂಶೋಧನೆಗಳು ದಾಖಲಾಗಿದೆ.

- Advertisement -
spot_img

Latest News

error: Content is protected !!