Wednesday, June 24, 2026
Homeತಾಜಾ ಸುದ್ದಿ'KRS ಬಾಗಿಲಿಗೆ ಸುಮಲತಾರನ್ನೇ ಮಲಗಿಸಿದ್ರೆ ನೀರು ನಿಲ್ಲಬಹುದು: ಹೆಚ್.ಡಿ ಕುಮಾರಸ್ವಾಮಿಯಿಂದ ಹೊಸ ವಿವಾದ

‘KRS ಬಾಗಿಲಿಗೆ ಸುಮಲತಾರನ್ನೇ ಮಲಗಿಸಿದ್ರೆ ನೀರು ನಿಲ್ಲಬಹುದು: ಹೆಚ್.ಡಿ ಕುಮಾರಸ್ವಾಮಿಯಿಂದ ಹೊಸ ವಿವಾದ

- Advertisement -
- Advertisement -

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಮಂಡ್ಯ ಸಂಸದೆ ಸುಮಲತಾ ಅವರ ಕುರಿತಂತೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕೆ.ಆರ್.ಎಸ್. ನಲ್ಲಿ ನೀರು ಸೋರಿಕೆಯಾಗುತ್ತಿದೆ ಎಂಬ ಸಂಸದೆ ಸುಮಲತಾರ ಹೇಳಿಕೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ. ಕೆ.ಆರ್.‌ಎಸ್. ರಕ್ಷಣೆಯನ್ನು ಅವರೇ ಹೊತ್ತುಕೊಂಡಂತೆ ಕಾಣುತ್ತಿದೆ. ಹೀಗಾಗಿ ಕೆ.ಆರ್‌.ಎಸ್. ಬಾಗಿಲಿಗೆ ಸುಮಲತಾರನ್ನೇ ಮಲಗಿಸಿದರೆ ಇದು ನಿಲ್ಲಬಹುದೇನೋ ಎಂದಿದ್ದಾರೆ.

ಮಂಡ್ಯ ಜಿಲ್ಲೆಗೆ ಇಂತಹ ಸಂಸದೆ ಹಿಂದೆ ಬಂದಿಲ್ಲ. ಮುಂದೆಯೂ ಬರೋದಿಲ್ಲ. ಏನೋ ಅನುಕಂಪದ ಅಲೆ ಮೇಲೆ ಅವರು ಸಂಸದೆಯಾಗಿ ಆಯ್ಕೆಯಾಗಿದ್ದಾರೆ. ಈಗಲಾದರೂ ಅವರು ಕೆಲಸ ಮಾಡದಿದ್ದರೆ ಮುಂದಿನ ಚುನಾವಣೆಯಲ್ಲಿ ಜನರೇ ಅವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

- Advertisement -

Latest News

error: Content is protected !!