Thursday, April 25, 2024
Homeಕರಾವಳಿಬೆಳ್ತಂಗಡಿಯ ವಿವಿಧ ಪ್ರದೇಶಗಳಲ್ಲಿ ಮತ್ತೆ ಸದ್ದು ಮಾಡುತ್ತಿದೆ ಸ್ಯಾಟಲೈಟ್ ಫೋನ್ ಕರೆಗಳು

ಬೆಳ್ತಂಗಡಿಯ ವಿವಿಧ ಪ್ರದೇಶಗಳಲ್ಲಿ ಮತ್ತೆ ಸದ್ದು ಮಾಡುತ್ತಿದೆ ಸ್ಯಾಟಲೈಟ್ ಫೋನ್ ಕರೆಗಳು

spot_img
- Advertisement -
- Advertisement -

ಬೆಳ್ತಂಗಡಿ: ಕರ್ನಾಟಕ ರಾಜ್ಯದ ಹಲವಡೆ ನಿಷೇಧಿತ ಸ್ಯಾಟಲೈಟ್ (ತುರಾಯ) ಕಾಲ್ ಸದ್ದು ಮಾಡುತ್ತಿದ್ದು ಅದರಲ್ಲಿಯೂ ಬೆಳ್ತಂಗಡಿ ತಾಲೂಕಿನ ನಾನಾ ಪ್ರದೇಶಗಳಲ್ಲಿ ಐದಕ್ಕೂ ಹೆಚ್ಚು ಭಾರಿ ಸ್ಯಾಟಲೈಟ್ ಕರೆ ಸಂಪರ್ಕ ಸಾಧಿಸಿರುವ ಬಗ್ಗೆ ‘ರಾ’ ಏಜೆನ್ಸಿ ರಾಜ್ಯಕ್ಕೆ ಮಾಹಿತಿ ನೀಡಿದೆ.

ಕೆಲ ದಿನಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಗ್ರಾಮದ ಶ್ರೀ ಭಗವತಿ ದೇವಸ್ಥಾನದ ಪಕ್ಕದಿಂದ ಸ್ಯಾಟಲೈಟ್ ಕರೆ ಸಂಪರ್ಕ ಸಾಧಿಸಿರುವ ಬಗ್ಗೆ ಕೇಂದ್ರದ ‘ರಾ’ ಏಜೆನ್ಸಿ ರಾಜ್ಯದ ಅಂತರಿಕ ಭದ್ರತಾ ಇಲಾಖೆ ಹಾಗೂ ಗುಪ್ತಚರ ಇಲಾಖೆಗೆ ತನಿಖೆ ಮಾಡಲು ಸಂಪರ್ಕ ಸಾಧಿಸಿದ ಪ್ರದೇಶದ ಲೋಕೇಷನ್ ಮಾಹಿತಿ ಕಳುಹಿಸಿಕೊಟ್ಟಿದ್ದೆ ಅದರಂತೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು ಯಾವುದೇ ಮಾಹಿತಿ ದೊರೆತ್ತಿಲ್ಲ.

ಮೂರು ತಿಂಗಳ ಹಿಂದೆ ಬೆಳ್ತಂಗಡಿ ತಾಲೂಕಿನ ನಾವೂರ ಗ್ರಾಮ ಮತ್ತು ಇಂದಬೆಟ್ಟು ಗ್ರಾಮದ ಮಧ್ಯದ ಪ್ರದೇಶದಿಂದ ಸ್ಯಾಟಲೈಟ್ ಕರೆ ಹೋಗಿದೆ ಎಂಬ ಮಾಹಿತಿ ‘ರಾ’ ಏಜೆನ್ಸಿ ರಾಜ್ಯದ ಅಧಿಕಾರಿಗಳಿಗೆ ಮಾಹಿತಿ ನೀಡಿದೆ. ಒಂಬತ್ತು ತಿಂಗಳ ಹಿಂದೆ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಮತ್ತು ಬೆಳಾಲು ಹಾಗೂ ಉಡುಪಿ ಜಿಲ್ಲೆಯ ಕಾರ್ಕಳ ಹಾಗೂ ಇತರ ಪ್ರದೇಶಗಳಲ್ಲಿ ಸ್ಯಾಟಲೈಟ್ ಕರೆ ಹೋಗಿದ್ದ ಮಾಹಿತಿ ‘ರಾ’ಏಜೆನ್ಸಿ ಮಾಹಿತಿ ನೀಡಿತ್ತು.

ಒಂದು ವರ್ಷದ ಹಿಂದೆ ಬೆಳ್ತಂಗಡಿ ತಾಲೂಕಿನ ಗೋವಿಂದೂರು ಪ್ರದೇಶದಿಂದ ಪಾಕಿಸ್ತಾನಕ್ಕೆ ಒಂದು ಸ್ಯಾಟಲೈಟ್ ಫೋನ್ ಕರೆ ಹೋಗಿದ್ದ ಬಗ್ಗೆ ರಾಜ್ಯದಲ್ಲಿ ದೊಡ್ಡ ಸುದ್ದಿಯಾಗಿತ್ತು. ಬೆಳ್ತಂಗಡಿ ತಾಲೂಕಿನ ಹಲವು ಗ್ರಾಮಗಳಲ್ಲಿ ಒಂದು ವರ್ಷದಲ್ಲಿ ಐದಕ್ಕೂ ಅನೇಕ ಭಾರಿ ಸ್ಯಾಟಲೈಟ್ ಕರೆ ಸಂಪರ್ಕ ಸಾಧಿಸಿದೆ. ಸ್ಯಾಟಲೈಟ್ ಫೋನ್ ಬಳಕೆ ಮುಂಬಯಿ ದಾಳಿ ನಂತರ ಭಾರತದಲ್ಲಿ ನಿಷೇಧವಾಗಿದೆ.

ಸ್ಯಾಟಲೈಟ್ ಕರೆ ಬಗ್ಗೆ ಕೇಂದ್ರದ ‘ರಾ’ ಏಜೆನ್ಸಿಗೆ ಮಾತ್ರ ಸ್ಯಾಟಲೈಟ್ ಫೋನ್ ಆನ್ ಮಾಡಿದರೆ ಲೋಕೇಷನ್ ಸಿಗುವುದು ಆ ಮಾಹಿತಿಯನ್ನು ರಾಜ್ಯದ ಗುಪ್ತಚರ ಹಾಗೂ ಅಂತರಿಕ ಭದ್ರತಾ ಇಲಾಖೆಗೆ ಕಳುಹಿಸಿ ತನಿಖೆ ಮಾಡಿ ವರದಿ ನೀಡಲು ಆದೇಶ ಮಾಡುತ್ತಾರೆ. ಆದ್ರೆ ಸ್ಯಾಟಲೈಟ್ ಕರೆ ಒಮ್ಮೆ ಆನ್ ಮಾಡಿ ಸಂಪರ್ಕ ಸಾಧಿಸಿ ಮತ್ತೆ ಅದನ್ನು ಆಫ್ ಮಾಡುವುದರಿಂದ ಪೊಲೀಸರಿಗೆ ಪತ್ತೆಹಚ್ಚಲು ಸಾಧ್ಯವಾಗುತ್ತಿಲ್ಲ.

- Advertisement -
spot_img

Latest News

error: Content is protected !!