Sunday, April 28, 2024
Homeಕರಾವಳಿಕಣಿಯೂರು, ಬಂದಾರು, ಮೊಗ್ರು ಗ್ರಾಮ ವ್ಯಾಪ್ತಿಯಲ್ಲಿ ರೂ.2.87 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಾಸಕ ಹರೀಶ್ ಪೂಂಜರಿಂದ...

ಕಣಿಯೂರು, ಬಂದಾರು, ಮೊಗ್ರು ಗ್ರಾಮ ವ್ಯಾಪ್ತಿಯಲ್ಲಿ ರೂ.2.87 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಾಸಕ ಹರೀಶ್ ಪೂಂಜರಿಂದ ಶಿಲಾನ್ಯಾಸ

spot_img
- Advertisement -
- Advertisement -

ಬೆಳ್ತಂಗಡಿ: ಕಣಿಯೂರು, ಬಂದಾರು ಮತ್ತು ಮೊಗ್ರು ಗ್ರಾಮ ವ್ಯಾಪ್ತಿಯಲ್ಲಿ ಶಾಸಕರ ಅನುದಾನದಲ್ಲಿ ನಿರ್ಮಾಣವಾದ ಹಾಗೂ ನಿರ್ಮಾಣವಾಗಲಿರುವ ಒಟ್ಟು ರೂ.2.87 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಿಲಾನ್ಯಾಸ ಮತ್ತು ಪೂರ್ತಿಗೊಂಡ ಕಾಮಗಾರಿಗಳ ಉದ್ಘಾನೆಯನ್ನು ಶಾಸಕ ಹರೀಶ್ ಪೂಂಜ ಇಂದು ನೆರವೇರಿಸಿದರು.

ಶಿಲಾನ್ಯಾಸಗೊಂಡ ಕಾಮಗಾರಿಗಳು-
ಕಣಿಯೂರು ಗ್ರಾಮದಲ್ಲಿ ರೂ.1.81 ಕೋಟಿ ವೆಚ್ಚದ ಕಾಮಗಾರಿಗಳಾದ ಪಿಲಿಗೂಡು ರಿಕ್ಷಾ ನಿಲ್ದಾಣ ಉದ್ಘಾಟನೆ, ಪಿಲಿಗೂಡು ಜನತಾ ಕಾಲನಿ ರಸ್ತೆ ಕಾಂಕ್ರೀಟೀಕರಣ, ಬರಂಬು ರಸ್ತೆ ಕಾಂಕ್ರೀಟೀಕರಣ, ಕಣಿಯೂರು ಮಹಾಮ್ಮಾಯಿ ಮಂದಿರದ ರಸ್ತೆ ಉದ್ಘಾಟನೆ, ಕಣಿಯೂರು ಅಂಗನವಾಡಿ ಕೇಂದ್ರಕ್ಕೆ ಹೊಸ ಕಟ್ಟಡದ ಶಿಲಾನ್ಯಾಸ, ನೆಕ್ಕಿಲುವಿನಿಂದ ಮುಚ್ಚರು ರಸ್ತೆ ಶಿಲಾನ್ಯಾಸ, ಪದ್ಮುಂಜ ಕಣಿಯೂರು ಸಂಪರ್ಕ ರಸ್ತೆ, ಪದ್ಮುಂಜ ಪ್ರಾ. ಆ. ಕೇಂದ್ರದಲ್ಲಿ ಇಸಿಜಿ ಯಂತ್ರ ಉದ್ಘಾಟನೆ, ಕೊಲ್ಲಾಜೆ ಮುಗೇರೋಡಿ ರಸ್ತೆ ಕಾಂಕ್ರೀಟೀಕರಣ, ಕೊಡ್ಯಡ್ಕ ಕೆದಿಬ ರಸ್ತೆ ಕಾಂಕ್ರೀಟಿಕರಣ ನೆರವೇರಿಸಲಾಯಿತು.

ಬಂದಾರು ಗ್ರಾಮದಲ್ಲಿ ರೂ.83 ಲಕ್ಷದ ಕಾಮಗಾರಿಗಳಾದ ಕೊಡ್ಯೇಲು ರಸ್ತೆ ಕಾಂಕ್ರೀಟೀಕರಣ, ಪೆರಲ್ದಪಲ್ಕೆ ಬೆಳ್ತಿಗೇರು ರಸ್ತೆ ಕಾಂಕ್ರೀಟೀಕರಣ, ಓಜಾಲಿಯಿಂದ ಪಿಲಿಚಾಮುಂಡಿ ಗುಡ್ಡೆ ಕಾಂಕ್ರೀಟೀಕರಣ, ಕೊಡಿನೆಕ್ಕಿಲು ಅನಾಬೆ ಕಾಂಕ್ರೀಟೀಕರಣ, ಚಾಕೊಟ್ಟತ್ತಡಿ ಕಾಂಕ್ರೀಟ್ ರಸ್ತೆ ಉದ್ಘಾಟನೆ, ಕುರಾಯದಿಂದ ಪುತ್ತಿಲ ಕಾಂಕ್ರಿಟ್ ರಸ್ತೆ ಉದ್ಘಾಟನೆ, ಮುಂಡೂರು ರಸ್ತೆ ಕಾಂಕ್ರೀಟ್ ರಸ್ತೆ, ಖಂಡಿಗ ಹೋಗುವ ದಾರಿಗೆ ತಡೆಗೋಡೆಗೆ ಶಿಲಾನ್ಯಾಸ ನೆರವೇರಿಸಲಾಯಿತು.

ಮೊಗ್ರು ಗ್ರಾಮದಲ್ಲಿ ಒಟ್ಟು ರೂ. 23 ಲಕ್ಷದ ಕಾಮಗಾರಿಗಳಾದ ದಪ್ಪದಪಲ್ಕೆ ಹತ್ತಿರ ಕಾಲು ಸಂಕ ರಚನೆ, ಮೊಗ್ರು ಗ್ರಾಮದ ಎರ್ಮಾಳದಿಂದ ಅಂತರ ರಸ್ತೆ ಕಾಂಕ್ರೀಟೀಕರಣ, ಮುಗೇರಡ್ಕದಿಂದ ಪರಾರಿ, ನೈಮಾರು ರಸ್ತೆ ಕಾಂಕ್ರೀಟೀಕರಣಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು.

ಈ ಸಂದರ್ಭದಲ್ಲಿ ತಾ.ಪಂ ಸದಸ್ಯ ಕೃಷ್ಣಯ್ಯ ಆಚಾರ್ಯ, ಅನಿತಾ ಕುಶಾಲಪ್ಪ ಗೌಡ, ಪದ್ಮುಂಜ ಸಹಕಾರಿ ಸಂಘದ ಅಧ್ಯಕ್ಷ ರಕ್ಷಿತ್ ಪಣಿಕ್ಕರ, ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಾಜಿ ಸುನಿಲ್ ಸಾಲಿಯಾನ್, ಮೊದಲಾದವರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!