Sunday, June 7, 2026
Homeಅಪರಾಧಬೆಳ್ತಂಗಡಿಯಲ್ಲಿ ಬಾವನಿಂದಲೇ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ:  ಪೋಕ್ಸೋ ಕಾಯ್ದೆಯಡಿ ಆರೋಪಿಯ ಬಂಧನ

ಬೆಳ್ತಂಗಡಿಯಲ್ಲಿ ಬಾವನಿಂದಲೇ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ:  ಪೋಕ್ಸೋ ಕಾಯ್ದೆಯಡಿ ಆರೋಪಿಯ ಬಂಧನ

- Advertisement -
- Advertisement -

ಬೆಳ್ತಂಗಡಿ : ಅತ್ತೆ ಮಗನೇ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಆಕೆ ಗರ್ಭಿಣಿಯಾಗಿರುವ ಘಟನೆ ಬೆಳ್ತಂಗಡಿ ತಾಲೂಕಿನ ಕಡಿರುದ್ಯಾವರ ಗ್ರಾಮದಲ್ಲಿ ನಡೆದಿದೆ.

ಪ್ರಕರಣಕ್ಕೆ ಸಂಬಂಧಪಟ್ಟಂತೆ ಕುವೆಟ್ಟು ಗ್ರಾಮದ ಸಬರಬೈಲಿನ ನಿವಾಸಿ ರಾಜೇಶ್ ಎಂಬಾತನನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಲಾಗಿದೆ.

ಸಂತ್ರಸ್ಥೆ ದಿನಾಂಕ: 25.07.2021 ರಂದು ತನ್ನ ತಂದೆಯ ಅಕ್ಕನ ಮನೆಯಾದ ಸಬರಬೈಲು ಎಂಬಲ್ಲಿಗೆ ಹೋಗಿದ್ದ ವೇಳೆ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಸುಮಾರು ರಾತ್ರಿ 8 ಗಂಟೆಯ ವೇಳೆಗೆ ಅತ್ತೆಯ ಮಗನಾದ  ರಾಜೇಶ್‌ ಎಂಬಾತ ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಸಂತ್ರಸ್ಥೆ ತನ್ನ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಅಲ್ಲದೇ ದಿನಾಂಕ:05.08.2021 ರಂದು ಮತ್ತೆ ಆರೋಪಿಯ ಮನೆಗೆ ಹೋಗಿದ್ದ ವೇಳೆ ಇದೇ ರೀತಿ ಲೈಂಗಿಕ ದೌರ್ಜನ್ಯವೆಸಗಿದ್ದಾನೆ ಎಂದು ಸಂತ್ರಸ್ಥೆ ದೂರಿದ್ದಾಳೆ.

 ಇನ್ನು ದಿನಾಂಕ:03.03.2022 ರಂದು ಬೆಳಿಗ್ಗೆ ಸಂತ್ರಸ್ಥೆ ತನ್ನ ಮನೆಯಲ್ಲಿ ನಿತ್ರಾಣಗೊಂಡು ಮಲಗಿದ್ದಾಗ ಆಕೆಯ ಹೊಟ್ಟೆಯ ಗಾತ್ರದಲ್ಲಾದ ವ್ಯತ್ಯಾಸವನ್ನು ಗಮನಿಸಿ ಹೆತ್ತವರು ವಿಚಾರಿಸಿದಾಗ ಆಕೆ ನಿಜಾಂಶವನ್ನು ತಿಳಿಸಿದ್ದಾಳೆ. ಬಳಿಕ ಬೆಳ್ತಂಗಡಿ ಠಾಣೆಗೆ ಬಂದು ದೂರು ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೋಕ್ಸೋ ಕಾಯ್ದೆಯಡಿ ಬೆಳ್ತಂಗಡಿ ಪೊಲೀಸರು ಆರೋಪಿ ರಾಜೇಶನನ್ನು ವಶಕ್ಕೆ ಪಡೆದಿದ್ದಾರೆ

- Advertisement -

Latest News

error: Content is protected !!