Friday, June 5, 2026
Homeತಾಜಾ ಸುದ್ದಿವಿಮಾನದಲ್ಲಿ ಗುಟ್ಕಾ ಕಲೆ; ಟ್ವಿಟ್ಟರ್​ನಲ್ಲಿ ಸೂಪರ್‌ಸ್ಟಾರ್‌ಗಳ ಕಾಲೆಳೆದ ನೆಟ್ಟಿಗರು

ವಿಮಾನದಲ್ಲಿ ಗುಟ್ಕಾ ಕಲೆ; ಟ್ವಿಟ್ಟರ್​ನಲ್ಲಿ ಸೂಪರ್‌ಸ್ಟಾರ್‌ಗಳ ಕಾಲೆಳೆದ ನೆಟ್ಟಿಗರು

- Advertisement -
- Advertisement -

ನವದೆಹಲಿ: ಸಾಮಾನ್ಯವಾಗಿ ಸಾರ್ವಜನಿಕ ಸ್ಥಳಗಳ ಸುತ್ತಮುತ್ತ ಗುಟ್ಕಾ ಮತ್ತು ವೀಳ್ಯದೆಲೆ ಕಲೆಗಳನ್ನು ನೋಡಬಹುದು. ಆದರೆ ಇದೀಗ ವಿಮಾನದಲ್ಲಿ ಗುಟ್ಕಾ ಉಗುಳಿರುವ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಛತ್ತೀಸ್‌ಗಢ ಕೇಡರ್‌ನ ಐಎಎಸ್ ಅಧಿಕಾರಿ ಅವನೀಶ್ ಶರಣ್ ಅವರು ವಿಮಾನದ ಕಿಟಕಿಯ ಕೆಳಗೆ ಗುಟ್ಕಾವನ್ನು ಉಗುಳಿರುವ ಕಲೆಯ ಫೋಟೋವನ್ನು ತಮ್ಮ ಟ್ವಿಟ್ಟರ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹಾಗೂ ಯಾರೋ ತಮ್ಮ ಗುರುತನ್ನು ಈ ಮೂಲಕ ಬಿಟ್ಟು ಹೋಗಿದ್ದಾರೆ ಎಂದು ಕ್ಯಾಪ್ಟನ್‌ನಲ್ಲಿ ಬರೆದುಕೊಂಡಿದ್ದಾರೆ.

ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಈ ಫೋಟೋ ಹಿಂದಿರುವ ವ್ಯಕ್ತಿ ಯಾರು ಎಂಬ ಕುತೂಹಲ ಮೂಡಿದೆ. ಈ ಪೋಸ್ಟ್‌ಗೆ 16,000 ಕ್ಕೂ ಹೆಚ್ಚು ಲೈಕ್‌ಗಳು ಬಂದಿದೆ. ಕೆಲವು ಟ್ವಿಟ್ಟರ್ ಬಳಕೆದಾರರು ಸೂಪರ್‌ಸ್ಟಾರ್‌ಗಳ ತಂಬಾಕು ಸೇವನೆಯ ಜಾಹೀರಾತುಗಳನ್ನು ಈ ಮೂಲಕ ಟೀಕಿಸಿದ್ದಾರೆ.

- Advertisement -

Latest News

error: Content is protected !!