Thursday, June 4, 2026
HomeUncategorizedಜುಲೈ 17ರಂದು ಮದುವೆ ನಿಗದಿಯಾಗಿದ್ದ ಯುವಕ ಅಪಘಾತದಲ್ಲಿ ನಿಧನ

ಜುಲೈ 17ರಂದು ಮದುವೆ ನಿಗದಿಯಾಗಿದ್ದ ಯುವಕ ಅಪಘಾತದಲ್ಲಿ ನಿಧನ

- Advertisement -
- Advertisement -

ಕಾಸರಗೋಡು: ಜು.17ರಂದುವ ಮದುವೆ ನಿಗದಿಯಾಗಿದ್ದ ಯುವಕನೊಬ್ಬ  ಬಕ್ರಿದ್ ಹಬ್ಬದಂದೇ ಅಪಘಾತಕ್ಕೆ ಬಲಿಯಾಗಿರುವ ಕಾಸರಗೋಡಿನಲ್ಲಿ ನಡೆದಿದೆ.

ಮುಟ್ಟತ್ತೋಡಿ ಹಿದಾಯತ್ ನಗರದ ಮುಹಮ್ಮದ್ ಅಶ್ರಫ್ (27) ಮೃತ ವ್ಯಕ್ತಿ.

ನಿನ್ನೆ ಸಂಜೆ ಮಂಗಳೂರು-ಕಾಸರಗೋಡು ರಾಷ್ಟ್ರೀಯ ಹೆದ್ದಾರಿಯ ಮೊಗ್ರಾಲ್‌ ಪುತ್ತೂರು ಪನ್ನಿಕುನ್‌ ಎಂಬಲ್ಲಿ ಆಟೋ ರಿಕ್ಷಾ ಮತ್ತು ಸ್ಕೂಟರ್ ನಡುವೆ ಅಪಘಾತ ಸಂಭವಿಸಿ ಅಶ್ರಫ್ ಮೃತಪಟ್ಟಿದ್ದಾರೆ‌.

ಶನಿವಾರ ಗಲ್ಪ್ ನಿಂದ ಬಂದಿದ್ದ ಅಶ್ರಫ್, ತನ್ನ ಸಹೋದರನ ಜೊತೆಗೂಡಿ ಚಿಕ್ಕಮ್ಮನ ಮನೆಗೆ ತೆರಳಿ ಮರಳುತ್ತಿದ್ದ ವೇಳೆ ಅಪಘಾತ ಸಂಭವಿಸಿದೆ. ಜೊತೆಯಲ್ಲಿದ್ದ ಸಹೋದರ ಇರ್ಫಾನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಇಬ್ಬರನ್ನೂ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಶ್ರಫ್‌ ಮೃತಪಟ್ಟಿದ್ದಾರೆ‌.

- Advertisement -

Latest News

error: Content is protected !!