Friday, June 5, 2026
Homeಕರಾವಳಿಬೆಳ್ತಂಗಡಿ: ಮುಂಡಾಜೆಯ ಸೋಮಂತಡ್ಕದ ದಿನಸಿ ಅಂಗಡಿಯಲ್ಲಿ ಕಳ್ಳತನ

ಬೆಳ್ತಂಗಡಿ: ಮುಂಡಾಜೆಯ ಸೋಮಂತಡ್ಕದ ದಿನಸಿ ಅಂಗಡಿಯಲ್ಲಿ ಕಳ್ಳತನ

- Advertisement -
- Advertisement -

ಬೆಳ್ತಂಗಡಿ:  ದಿನಸಿ ಅಂಗಡಿಯಲ್ಲಿ ಕಳ್ಳತನ ಮಾಡಿರುವ ಘಟನೆ ಮುಂಡಾಜೆಯ ಸೋಮಂತಡ್ಕದಲ್ಲಿ ನಡೆದಿದೆ. ರಾಷ್ಟೀಯ ಹೆದ್ದಾರಿ ಪಕ್ಕದಲ್ಲಿ.ಯೇ ಇರುವ ಪದ್ಮಾಂಬಾ ಟ್ರೇಡರ್ಸ್‌ಗೆ ನುಗ್ಗಿದ ಕಳ್ಳ ಅಂಗಡಿಯ ಮೇಜಿನ ಒಳಗೆ ಇಟ್ಟಿದ 50,000 ರೂ.ನಗದನ್ನುಕದ್ದು ಪರಾರಿಯಾಗಿದ್ದಾನೆ.

ಮುಂಜಾನೆ 3.40ರ ಸುಮಾರಿಗೆ ಕಳ್ಳ ದ್ವಿಚಕ್ರ ವಾಹನದಲ್ಲಿ ಬಂದಿದ್ದು, ಅಂಗಡಿಗಿಂತ ಸ್ವಲ್ಪ ದೂರದಲ್ಲಿ ಬೈಕ್ ನಿಲ್ಲಿಸಿ ಮುಖಕ್ಕೆ ಮಾಸ್ಕ್ ಹಾಕಿ ರಾಡ್‌ ಮತ್ತು ಪ್ಲಾಸ್ಟಿಕ್‌ ಬ್ಯಾಗ್‌ ಕೈಯಲ್ಲಿ ಹಿಡಿದುಕೊಂಡು ಅಂಗಡಿ ಕಡೆ ಹೋಗುವ ದೃಶ್ಯ ಸಮೀಪದ ಅಂಗಡಿಯೊಂದರ ಸಿಸಿ ಟಿವಿಯಲ್ಲಿ ದಾಖಲಾಗಿದೆ.

ಈ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆಗೆ ಅಂಗಡಿ ಮಾಲೀಕ ಪದ್ಮೇಶ್‌ ದೂರು ನೀಡಿದ್ದು ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಇತ್ತೀಚೆಗೆ ಬೆಳ್ತಂಗಡಿಯ ಕೆಲವೆಡೆ ಕಳವು ಯತ್ನ ನಡೆದಿದೆ.

- Advertisement -

Latest News

error: Content is protected !!