Monday, June 8, 2026
Homeತಾಜಾ ಸುದ್ದಿಮಂಗಳೂರು: ಕಾಲೇಜು ನಿರ್ಮಾಣದ ಕನಸು ಕಂಡ ಹಾಜಬ್ಬರ ಮನವಿಗೆ ಸರ್ಕಾರದಿಂದ ಗ್ರೀನ್‌ ಸಿಗ್ನಲ್:‌ ಪಿಯು ಕಾಲೇಜು...

ಮಂಗಳೂರು: ಕಾಲೇಜು ನಿರ್ಮಾಣದ ಕನಸು ಕಂಡ ಹಾಜಬ್ಬರ ಮನವಿಗೆ ಸರ್ಕಾರದಿಂದ ಗ್ರೀನ್‌ ಸಿಗ್ನಲ್:‌ ಪಿಯು ಕಾಲೇಜು ಮಂಜೂರು

- Advertisement -
- Advertisement -

ಮಂಗಳೂರು: ಅಕ್ಷರ ಸಂತ ಹರೇಕಳ ಹಾಜಬ್ಬ ಅವರ ಬೇಡಿಕೆ ಕೊನೆಗೂ ಈಡೇರಿದೆ. ಹಾಜಬ್ಬ ಮನವಿಗೆ ಕೊನೆಗೂ ಸರ್ಕಾರ ಅಸ್ತು ಎಂದಿದೆ. ಹಾಜಬ್ಬ ಅವರಿಗೆ ರಾಜ್ಯ ಸರಕಾರ ಪಿಯು ಕಾಲೇಜು ಮಂಜೂರುಗೊಳಿಸಿ ಆದೇಶ ಹೊರಡಿಸಿದೆ.

ಇಂಗ್ಲಿಷ್ ಬಾರದೆ ಶಾಲೆ ಆರಂಭಿಸಲು ಕನಸು ಕಂಡು ಹರೇಕಳ ಹಾಜಬ್ಬ ತಾನು ಅನುಭವಿಸಿದ ಕಷ್ಟ ನನ್ನ ಊರಿನ ಮಕ್ಕಳು ಪಡಬಾರದು ಎಂದು ಶಾಲೆ ಕಟ್ಟಲು ಪಣ ತೊಟ್ಟರು. ಹಾಜಬ್ಬ ನಿರ್ಮಿಸಿದ ಹರೇಕಳದ ನ್ಯೂಪಡು ಸರಕಾರಿ ಶಾಲೆ ಇಂದು ಅದೆಷ್ಟೋ ವಿದ್ಯಾರ್ಥಿಗಳು ವಿದ್ಯಾರ್ಜನೆ ಮಾಡಲು ಕಾರಣವಾಗಿದೆ. ಪುಟ್ಟ ಹಳ್ಳಿಯಲ್ಲಿ ಶಾಲೆ ನಿರ್ಮಿಸಿ ನಂತರ ಕಾಲೇಜು ನಿರ್ಮಾಣದ ಕನಸು ಕಂಡ ಹಾಜಬ್ಬರ ಕನಸು ಈಡೇರುತ್ತಿದೆ.

ಹಲವು ವರ್ಷಗಳಿಂದ ಹಾಜಬ್ಬ ಪಿಯು ಕಾಲೇಜಿಗಾಗಿ ಜನಪ್ರತಿನಿಧಿಗಳನ್ನು ಭೇಟಿ ಮಾಡಿ ಮನವಿಗಳನ್ನು ಸಲ್ಲಿಸುತ್ತಲಿದ್ದರು. ಪದ್ಮಶ್ರೀ ಪುರಸ್ಕೃತರಾದ ಅವರ ಬೇಡಿಕೆಗೆ ಹೆಚ್ಚಿನ ಮನ್ನಣೆ ಸಿಕ್ಕಿತ್ತು. ಇದೀಗ ‘ಕರ್ನಾಟಕ ರಾಜ್ಯೋತ್ಸವ’ದ ಉಡುಗೊರೆ ಎಂಬಂತೆ ಪಿಯು ಕಾಲೇಜು ಮಂಜೂರುಗೊಳಿಸಲಾಗಿದೆ.

- Advertisement -

Latest News

error: Content is protected !!