Thursday, June 4, 2026
Homeಅಪರಾಧಸಭೆಯಲ್ಲಿ ಪ್ರಶ್ನೆ ಕೇಳಿದ್ದಕ್ಕೆ ಗ್ರಾ.ಪಂ. ಸದಸ್ಯನ ಮೇಲೆ ಗ್ರಾ.ಪಂ. ಅಧ್ಯಕ್ಷನಿಂದ ಹಲ್ಲೆ

ಸಭೆಯಲ್ಲಿ ಪ್ರಶ್ನೆ ಕೇಳಿದ್ದಕ್ಕೆ ಗ್ರಾ.ಪಂ. ಸದಸ್ಯನ ಮೇಲೆ ಗ್ರಾ.ಪಂ. ಅಧ್ಯಕ್ಷನಿಂದ ಹಲ್ಲೆ

- Advertisement -
- Advertisement -

ಬಂಟ್ವಾಳ: ಗ್ರಾಮ ಪಂಚಾಯತ್‌ನ ಸಾಮಾನ್ಯ ಸಭೆಯಲ್ಲಿ ಪ್ರಶ್ನೆ ಕೇಳಿದ್ದಕ್ಕೆ ಗ್ರಾ.ಪಂ. ಸದಸ್ಯನ ಮೇಲೆ ಅಧ್ಯಕ್ಷನಿಂದ ಹಲ್ಲೆ ನಡೆಸಿದ್ದಲ್ಲದೆ ಚೂರಿ ಇರಿಯಲು ಯತ್ನಿಸಿದ ಘಟನೆ ಗ್ರಾ.ಪಂ. ಸಭಾಂಗಣದೊಳಗೆ ನಡೆದಿದೆ. ಗಾಯಗೊಂಡ ಸದಸ್ಯ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಾಗಿದ್ದು, ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ನಾವೂರ ಗ್ರಾ.ಪಂ.ಸದಸ್ಯ ಜನಾರ್ಧನ ಎಂಬವರ ಮೇಲೆ ಇಲ್ಲಿನ ಗ್ರಾ.ಪಂ.ಅಧ್ಯಕ್ಷ ಉಮೇಶ್ ಕುಲಾಲ್ ಅವರು ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಗ್ರಾ.ಪಂ.ನಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯ ಕಾಮಾಗಾರಿ ವಿಚಾರಕ್ಕೆ ಸಂಬಂಧಿಸಿದಂತೆ ಬಿಲ್ ಪಾವತಿ ವಿಚಾರಕ್ಕೆ ಪ್ರಶ್ನೆ ಕೇಳಿದ್ದಕ್ಕೆ ಅಧ್ಯಕ್ಷ ಹಲ್ಲೆ ನಡೆಸಿ ಬಳಿಕ ಚೂರಿಯಿಂದ ಇರಿತ ಮಾಡಲು ಮುಂದಾಗಿದ್ದ, ಸದಸ್ಯರ ಮಧ್ಯಪ್ರವೇಶದಿಂದಾಗಿ ಚೂರಿ ಇರಿತದಿಂದ ಬಚಾವ್ ಆಗಿದ್ದೇನೆ ಎಂದು ಹಲ್ಲೆ ಗೊಳಗಾದ ಸದಸ್ಯ ಜನಾರ್ದನ ತಿಳಿಸಿದ್ದಾರೆ.

ಸದಸ್ಯ ಜನಾರ್ಧನ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಗ್ರಾಮಾಂತರ ಎಸ್.ಐ.ಹರೀಶ್ ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ.

- Advertisement -

Latest News

error: Content is protected !!