- Advertisement -
- Advertisement -
ಬೆಳ್ತಂಗಡಿ; ಮಲೆಬೆಟ್ಟುವಿನಲ್ಲಿ ಗ್ರಾಮ ಒನ್ ಸೇವಾ ಕೇಂದ್ರವನ್ನು ದಿನಾಂಕ 14/09/2023ನೇ ಗುರುವಾರ ಉದ್ಘಾಟನೆ ಮಾಡಲಾಯಿತು.
ಗ್ರಾಮ ಪಂಚಾಯತ್ ಕೊಯ್ಯೂರು ಇದರ ಅಧ್ಯಕ್ಷರಾದ ದಯಾಮಣಿ ಇವರು ಉಧ್ಘಾಟನೆ ನೆರವೇರಿಸಿ ಶುಭಹಾರೈಸಿದರು, ವಿಶೇಷ ಅತಿಥಿಗಳಾಗಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಭಾಗವಹಿಸಿ ನೂತನ ಕೇಂದ್ರಕ್ಕೆ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ನಾಗೇಶ್ ಕುಮಾರ್ ಅಧ್ಯಕ್ಷರು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಸಮಿತಿ ಗ್ರಾಮೀಣ,ನವೀನ ಕುಮಾರ್ , ಅಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ನಿ. ಕೊಯ್ಯೂರು, ಹರೀಶ್ , ಗ್ರಾಮ ಪಂಚಾಯತ್ ಉಪಾಧ್ಯಕ್ಷರು ಕೊಯ್ಯೂರು, ಪ್ರವೀಣ್ ಕುಮಾರ್ ತಾಲೂಕು ಪಂಚಾಯತ್ ಮಾಜಿ ಸದಸ್ಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಆಗಮಿಸಿದ ಎಲ್ಲರನ್ನೂ ಮಾಲೀಕರಾದ ಮೊಹಮ್ಮದ್ ಸಿದ್ದಿಕ್ ಮಲೆಬೆಟ್ಟು ಹಾಗೂ ಪರ್ಝಾನ ದಂಪತಿ ಸ್ವಾಗತಿಸಿದರು. ಗುರುರಾಜ್ ಗುರಿಪಳ್ಳ ಕಾರ್ಯಕ್ರಮ ನಿರೂಪಿಸಿದರು.
- Advertisement -