Friday, June 5, 2026
Homeಕೊಡಗುಕೊಡಗಿನಲ್ಲಿ ಪಿಯುಸಿ ಓದುತ್ತಿದ್ದ ಅಪ್ರಾಪ್ತೆ ಹಿಂದೂ ಹುಡುಗಿಯರ ಕಿಡ್ನ್ಯಾಪ್;  ನಾಲ್ವರು ಮುಸ್ಲಿಂ ಯುವಕರು ಅರೆಸ್ಟ್

ಕೊಡಗಿನಲ್ಲಿ ಪಿಯುಸಿ ಓದುತ್ತಿದ್ದ ಅಪ್ರಾಪ್ತೆ ಹಿಂದೂ ಹುಡುಗಿಯರ ಕಿಡ್ನ್ಯಾಪ್;  ನಾಲ್ವರು ಮುಸ್ಲಿಂ ಯುವಕರು ಅರೆಸ್ಟ್

- Advertisement -
- Advertisement -

ಕೊಡಗಿನಲ್ಲಿ ಪಿಯುಸಿ ಓದುತ್ತಿದ್ದ ಅಪ್ರಾಪ್ತೆ ಹಿಂದೂ ಹುಡುಗಿಯನ್ನು ಕಿಡ್ನ್ಯಾಪ್ ಮಾಡುತ್ತಿದ್ದ ನಾಲ್ವರು ಮುಸ್ಲಿಂ ಯುವಕರನ್ನು ಅರೆಸ್ಟ್ ಮಾಡಲಾಗಿದೆ.

ಪಿಯುಸಿ ಓದುತ್ತಿದ್ದ ಅಪ್ರಾಪ್ತ ಹುಡುಗಿಯರನ್ನು ಕೊಡಗಿನಿಂದ ಮೈಸೂರಿಗೆ ಯುವಕರು ಅಪಹರಿಸಿ ಕರೆದೊಯ್ಯುತ್ತಿದ್ದರು ಎನ್ನಲಾಗಿದೆ. ಈ ವೇಳೆ ಇದನ್ನು ಗಮನಿಸಿದ್ದ ಸ್ಥಳೀಯರು ಕೂಡಲೇ ಫೋನ್ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.ಈ ಪ್ರಕರಣಕ್ಕೆ ಸಂಬಂಧ ಪಟ್ಟ ಹಾಗೆ ನಾಲ್ವರು ಯುವಕರನ್ನು ಅರೆಸ್ಟ್ ಮಾಡಲಾಗಿದೆ. ನಿಜಾಮಿಲ್, ಸಮದ್, ತಪ್ಸಿರ್ ಹಾಗೂ ಇರ್ಫಾನ್ ಬಂಧಿತ ಆರೋಪಿಗಳು ಎಂದು ತಿಳಿದು ಬಂದಿದೆ.ನಾಲ್ವರು ಆರೋಪಿಗಳು ಪೈಯಿಂಟಿಂಗ್ ಹಾಗೂ ಮತ್ತಿತರೆ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ.

ಸ್ಥಳೀಯರು ಮಾಹಿತಿ ನೀಡುತ್ತಿದ್ದಂತೆ ಪೊಲೀಸರು ಚೇಸಿಂಗ್ ಮಾಡಲು ಮುಂದಾಗಿದ್ದಾರೆ.ಈ ವೇಳೆ ಕುಶಾಲನಗರದಲ್ಲಿ ಬಾಲಕಿಯರನ್ನು ಇಳಿಸಿದ ಯುವಕರು  ಮೈಸೂರಿಗೆ ಎಸ್ಕೇಪ್ ಆಗಿದ್ದಾರೆಂದು ತಿಳಿದು ಬಂದಿದೆ. ಬಳಿಕ ಮೈಸೂರಿನ ಮಂಡಿ ಮೊಹಲ್ಲಾದಿಂದ ನಾಲ್ವರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಸದ್ಯ ನಾಲ್ವರು ಆರೋಪಿಗಳ ಆರೋಗ್ಯ ತಪಾಸಣೆಗೆ  ಪೊಲೀಸರು ಮಡಿಕೇರಿ ಆಸ್ಪತ್ರೆಗೆ ಕರೆದೊಯ್ದು  ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.

- Advertisement -

Latest News

error: Content is protected !!