Wednesday, May 1, 2024
Homeಕರಾವಳಿಸುಬ್ರಹ್ಮಣ್ಯದಲ್ಲಿ ಗ್ರಾ.ಪಂ. ಸದಸ್ಯೆ ನಾಪತ್ತೆ

ಸುಬ್ರಹ್ಮಣ್ಯದಲ್ಲಿ ಗ್ರಾ.ಪಂ. ಸದಸ್ಯೆ ನಾಪತ್ತೆ

spot_img
- Advertisement -
- Advertisement -

ಸುಬ್ರಹ್ಮಣ್ಯ:  ಗ್ರಾ.ಪಂ. ಸದಸ್ಯೆಯೊಬ್ಬರು ನಾಪತ್ತೆಯಾಗಿರುವ ಘಟನೆ ಸುಬ್ರಮಣ್ಯದ ಐನೆಕಿದು ಗ್ರಾಮದ ಮೂಕಮಲೆ ಎಂಬಲ್ಲಿ ನಡೆದಿದೆ. ಇಲ್ಲಿನ  ಶಶಿಕಾಂತ್‌ ಎಂಬವರ ಪತ್ನಿ ಭಾರತಿ ಮೂಕಮಲೆ (33) ಅವರು ಅ. 29ರಂದು ಕಾಣೆಯಾಗಿರುವುದಾಗಿ ಸುಬ್ರಹ್ಮಣ್ಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

ಈ ಬಗ್ಗೆ ಭಾರತಿ ಅವರ ಪತಿ ದೂರು ನೀಡಿದ್ದು ನಾನು ಅ.29ರ ಮಧ್ಯಾಹ್ನ ತನಕ ಕೆಲಸಕ್ಕೆ ಹೋಗಿ ಬಳಿಕ ಮನೆಗೆ ಹೋಗಿ ತಾಯಿ ಸರಸ್ವತಿ ಹಾಗೂ ಅತ್ತೆ ಭವಾನಿ ಅವರನ್ನು ಚಿಕಿತ್ಸೆಗಾಗಿ ಕಾಣಿಯೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ವಾಪಸ್‌ ರಾತ್ರಿ ಮನೆಗೆ ಬಂದ ವೇಳೆ ಪತ್ನಿ ಮನೆಯಲ್ಲಿ ಇರಲಿಲ್ಲ. ಆ ಬಳಿಕ ತಂದೆ ಹಾಗೂ ಮಕ್ಕಳಲ್ಲಿ ವಿಚಾರಿಸಿದಾಗ ಅವರು ಎಲ್ಲಿಯೋ ಹೋಗಿ ಬರುವುದಾಗಿ ತಿಳಿಸಿ ಹೋಗಿರುತ್ತಾಳೆ ಎಂದು ತಿಳಿಸಿದ್ದಾರೆ. ಬಳಿಕ ಪತ್ನಿಗೆ ಕರೆ ಮಾಡಿದಾಗ ಫೋನ್‌ ಸ್ವೀಚ್‌ ಆಫ್‌ ಆಗಿತ್ತು ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಸಂಬಂಧಿಕರಲ್ಲಿ, ನೆರೆಕರೆಯವರಲ್ಲಿ ವಿಚಾರಿಸಿದಾಗ ಯಾವುದೇ ಸುಳಿವು ಸಿಕ್ಕಿಲ್ಲ ಎಂದು  ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!