Tuesday, July 14, 2026
Homeಕರಾವಳಿಉಡುಪಿಪಡುಬಿದ್ರಿಯಲ್ಲಿ ತಾಯಿ ಮತ್ತು ಮಗು ನಾಪತ್ತೆ

ಪಡುಬಿದ್ರಿಯಲ್ಲಿ ತಾಯಿ ಮತ್ತು ಮಗು ನಾಪತ್ತೆ

- Advertisement -
- Advertisement -

ಪಡುಬಿದ್ರಿ: ತಾಯಿ ಮತ್ತು ಮಗು ನಾಪತ್ತೆಯಾಗಿರುವ ಪ್ರಕರಣ ಪಡುಬಿದ್ರಿಯಲ್ಲಿ ನಡೆದಿದೆ.

ಶ್ರೀಕಾಂತ್ ಹರಿಜನ ಎಂಬವರು ತಮ್ಮ ಪತ್ನಿ ಮತ್ತು ಮಗು ನಾಪತ್ತೆಯಾಗಿರುವುದಾಗಿ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರುದಾರ ಶ್ರೀಕಾಂತ್ ಒಂಬತ್ತು ವರ್ಷದ ಹಿಂದೆ ಪ್ರೇಮ ವಿವಾಹವಾಗಿದ್ದು, ಒಂದು ವರ್ಷದ ಹಿಂದೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿದ್ದ ಹಿನ್ನೆಲೆಯಲ್ಲಿ ಪತ್ನಿ ತಮ್ಮ ತವರು ಮನೆಯಲ್ಲಿದ್ದರು ಎನ್ನಲಾಗಿದೆ.

ಹದಿನೈದು ದಿನಗಳ ಹಿಂದೆ ಪಡುಬಿದ್ರಿಯ ಸುಣ್ಣದ ಗೂಡು ಎಂಬಲ್ಲಿನ ಬಾಡಿಗೆ ಮನೆಯಲ್ಲಿ ಕುಟುಂಬ ವಾಸವಾಗಿದ್ದರು ಎನ್ನಲಾಗಿದೆ

ಕೆಲಸಕ್ಕೆ ಹೋಗಿದ್ದ ಶ್ರೀಕಾಂತ್ ಮನೆಗೆ ಬಂದಾಗ ಬಾಗಿಲು ಮುಚ್ಚಲ್ಪಟ್ಟಿದ್ದು, ಮನೆಯೊಳಗೆ ಹೋಗಿ ನೋಡಿದಾಗ ಪತ್ನಿ ಮತ್ತು ಮಗುವಿನ ಬಟ್ಟೆಗಳು ಇರಲಿಲ್ಲ ಎಂದು ಹೇಳಲಾಗಿದೆ.

ನಂತರ ಅಕ್ಕ ಪಕ್ಕದವರು ಹಾಗೂ ಸಂಬಂಧಿಕರನ್ನು ವಿಚಾರಿಸಿದ ಪತಿ ಶ್ರೀಕಾಂತ್, ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

- Advertisement -

Latest News

error: Content is protected !!