Saturday, June 6, 2026
Homeತಾಜಾ ಸುದ್ದಿಗೋವಿಂದ ಕಾರಜೋಳ ಸೇರಿ ಕುಟುಂಬದ 8 ಮಂದಿಗೆ ಕೊರೋನಾ ಸೋಂಕು- ಪುತ್ರ ಡಾ. ಗೋಪಾಲ್ ಸ್ಥಿತಿ...

ಗೋವಿಂದ ಕಾರಜೋಳ ಸೇರಿ ಕುಟುಂಬದ 8 ಮಂದಿಗೆ ಕೊರೋನಾ ಸೋಂಕು- ಪುತ್ರ ಡಾ. ಗೋಪಾಲ್ ಸ್ಥಿತಿ ಗಂಭೀರ!..

- Advertisement -
- Advertisement -

ಬೆಂಗಳೂರು: ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಸೇರಿದಂತೆ ಕುಟುಂಬದ 8 ಮಂದಿಗೆ ಕೊರೋನಾ ಸೋಂಕು ತಗುಲಿದ್ದು ಕಾರಜೋಳ ಅವರು ಕೊರೊನಾದಿಂದ ಗುಣಮುಖರಾಗಿದ್ದಾರೆ. ಆದರೆ ಪುತ್ರ ಡಾ. ಗೋಪಾಲ್ ಸ್ಥಿತಿ ಗಂಭೀರವಾಗಿದ್ದು 23 ದಿನಗಳಿಂದ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಡಾ. ಗೋಪಾಲ್ ಕಾರಜೋಳ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೈದರಾಬಾದ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ವಿಶ್ರಾಂತಿ ಯಲ್ಲಿರುವ ಕಾರಜೋಳ ಅವರು ತಮ್ಮ ಕರ್ತವ್ಯ ಗಳ್ಳನ್ನು ಮನೆಯಿಂದಲೇ ನಿರ್ವಹಿಸುತ್ತಿದ್ದಾರೆ. “ಸಾರ್ವಜನಿಕ ಬದುಕಿನಲ್ಲಿರುವವರ ವೈಯಕ್ತಿಕ ಸಂಕಷ್ಟ ಜನರಿಗೆ ತಿಳಿದಿರುವುದಿಲ್ಲ. ಸಂಕಷ್ಟ ಅನುಭವಿಸಿದವರಿಗಷ್ಟೇ ಅದರ ನೋವು ಗೊತ್ತಿರುತ್ತದೆ. ಸಾರ್ವಜನಿಕ ಜೀವನದಲ್ಲಿರುವವರ ಹಾಜರಿ ಅಥವಾ ಗೈರು ಹಾಜರಿಯನ್ನು ಕನ್ನಡಕ ಹಾಕಿ ನೋಡುವ ಪ್ರವೃತ್ತಿ ಒಳ್ಳೆಯದಲ್ಲ” ಎಂದು ಕಾರಜೋಳ ಅವರು ಹೇಳಿದ್ದಾರೆ.

- Advertisement -

Latest News

error: Content is protected !!