Monday, May 13, 2024
Homeತಾಜಾ ಸುದ್ದಿಬದುಕಿದ್ದ ಯುವಕನ ದೇಹವನ್ನು ಪೋಸ್ಟ್ ಮಾರ್ಟಂಗೆ ರವಾನಿಸಿದ ಆಸ್ಪತ್ರೆ ಸಿಬ್ಬಂದಿ: ಗೆಳೆಯ ಸತ್ತಿದ್ದಾನೆಂದು ಸ್ಟೇಟಸ್ ಹಾಕಿಕೊಂಡ...

ಬದುಕಿದ್ದ ಯುವಕನ ದೇಹವನ್ನು ಪೋಸ್ಟ್ ಮಾರ್ಟಂಗೆ ರವಾನಿಸಿದ ಆಸ್ಪತ್ರೆ ಸಿಬ್ಬಂದಿ: ಗೆಳೆಯ ಸತ್ತಿದ್ದಾನೆಂದು ಸ್ಟೇಟಸ್ ಹಾಕಿಕೊಂಡ ಗೆಳೆಯರು: ಆಮೇಲೆ ಏನಾಯ್ತು ಗೊತ್ತಾ?

spot_img
- Advertisement -
- Advertisement -

ಬೆಳಗಾವಿ: ಯುವಕನೊಬ್ಬ ಸತ್ತಿದ್ದಾನೆಂದು ಆತನ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕೊಂಡೊಯ್ದದಾಗ ಆತ ಬದುಕಿದ್ದಾನೆ ಅಂತಾ ಗೊತ್ತಾದ ಅಚ್ಚರಿಯ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಶಂಕರ್​ ಗೊಂಬಿ(27) ಎಂಬ ಯುವಕನಿಗೆ  ಫೆಬ್ರವರಿ 27 ರಂದು ರಸ್ತೆ ದಾಟುವಾಗ ಕಾರು ಡಿಕ್ಕಿಯಾಗಿ ಶಂಕರ್​ರವರಿಗೆ ತಲೆಗೆ ಏಟುಬಿದ್ದು  ಗಂಭೀರ ಗಾಯಗಳಾಗಿತ್ತು. ಆತನನ್ನು ಚಿಕಿತ್ಸೆಗಾಗಿ ಅವರನ್ನು ಚಿಕಿತ್ಸೆಗಾಗಿ ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬದುಕುವ ಸಾಧ್ಯತೆ ಕಡಿಮೆ ಎಂದಿದ್ದ ವೈದ್ಯರು ಆತನನ್ನು ವೆಂಟಿಲೇಟರ್​ ಅಳವಡಿಸಿ ಆಂಬುಲೆನ್ಸ್​ ಮೂಲಕ ಮಹಾಲಿಂಗಪುರ ಪಟ್ಟಣಕ್ಕೆ ಕಳಿಸಲಾಗಿತ್ತು. ಮಾರ್ಗ ಮಧ್ಯೆ ಆತ ಸಾವನ್ನಪ್ಪಿದಾನೆಂದು ಅನುಮಾನಗೊಂಡ  ಹೆತ್ತವರು ಆತನನ್ನು ಮಹಾಲಿಂಗಪುರ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಶಂಕರ್​ರನ್ನ ಪರೀಕ್ಷೆ ಮಾಡಿದ ವೈದ್ಯರು ಅವರು ಮೃತನಾಗಿದ್ದಾನೆಂದು ಎಂದು ಹೇಳಿ ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದರು.

ವಿಚಾರ ಗೊತ್ತಾಗುತ್ತಿದ್ದಂತೆ ತಮ್ಮ ಸ್ನೇಹಿತ ಸತ್ತನೆಂದು ತಿಳಿದು ಶಂಕರ್​ ಸ್ನೇಹಿತರು ಸಾಮಾಜಿಕ ಜಾಲತಾಣದಲ್ಲಿ ಮಿಸ್​ ಯು ಅಂತ ಪೋಸ್ಟ್,​ ಸ್ಟೇಟಸ್​ಗಳನ್ನ ಹಾಕಿಕೊಂಡಿದ್ದಾರೆ. ಮರಳಿ ಬಾರದೂರಿಗೆ ಪಯಣ ಎಂಬ ಹಾಡಿನ ಮೂಲಕ ಭಾವಪೂರ್ಣ ಶ್ರದ್ಧಾಂಜಲಿಯನ್ನೂ ಅರ್ಪಿಸಿದ್ದಾರೆ. ಆದರೆ ಪೋಸ್ಟ್​ ಮಾರ್ಟಂ ಮಾಡಲು ಮುಂದಾದ ವೈದ್ಯರು ಉಸಿರಾಟ, ಭುಜ ಕಾಲು ಚಲನವಲನ ಕಂಡು ಇವರಿನ್ನೂ ಬದುಕಿದ್ದಾರೆ ಎಂದು ಚಿಕಿತ್ಸೆಗಾಗಿ ವಾಪಸ್ಸ್​​​ ಆಸ್ಪತ್ರೆಗೆ ಕಳಿಸಿದ್ದಾರೆ. ಆ ನಂತರ ಶಂಕರ್​ ಗೆಳೆಯರು ಸೊಷಿಯಲ್​ ಮೀಡಿಯಾದಲ್ಲಿ ಹಾಕಿದ್ದ ಸ್ಟೇಟಸ್​ಗಳನ್ನ ತೆಗೆದಿದ್ದಾರೆ. ಮತ್ತೆ ಸಾವನ್ನು ಗೆದ್ದು ಬಾ ಎಂದು ಹೊಸ ಪೋಸ್ಟ್​ಗಳನ್ನು ಹಾಕಿದ್ದಾರೆ. ಸದ್ಯ ಶಂಕರ್​ ಗೊಂಬಿಯವರನ್ನು ಮಹಾಲಿಂಗಪುರ ಪಟ್ಟಣದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.

- Advertisement -
spot_img

Latest News

error: Content is protected !!