Thursday, June 4, 2026
Homeಕರಾವಳಿಜೈಲಿಗೆ ಹೋಗಿ ಬಂದ್ರೂ ಹಳೆ ಚಾಳಿ ಮುಂದುವರೆಸಿದ ಯುವಕ: ಉಳ್ಳಾಲದಲ್ಲಿ ಮಹಿಳೆಯ ಸರ ಎಳೆದು ಪರಾರಿಯಾದಾತನ...

ಜೈಲಿಗೆ ಹೋಗಿ ಬಂದ್ರೂ ಹಳೆ ಚಾಳಿ ಮುಂದುವರೆಸಿದ ಯುವಕ: ಉಳ್ಳಾಲದಲ್ಲಿ ಮಹಿಳೆಯ ಸರ ಎಳೆದು ಪರಾರಿಯಾದಾತನ ಬಂಧನ

- Advertisement -
- Advertisement -

ಉಳ್ಳಾಲ : ತೋಟದಿಂದ ಮಹಳೆಯೊಬ್ಬರು ಅಡಿಕೆ ಸೋಗೆ ತರುತ್ತಿದ್ದ ವೇಳೆ ಯುವಕನೊಬ್ಬ ಅವರ ಸರ ಕದ್ದು ಪರಾರಿಯಾಗಿ ಪೊಲೀಸರ ಅತಿಥಿಯಾಗಿರುವ ಘಟನೆ ಕೊಣಾಜೆಯಲ್ಲಿ ನಡೆದಿದೆ.

ಬಂಧಿತ ಆರೋಪಿಯನ್ನು ಪಾನೇಲ ನಿವಾಸಿ ಇರ್ಷಾದ್ (23) ಎಂದು ಗುರುತಿಸಲಾಗಿದೆ. ಬೋಳಿಯಾರ್ ನಿವಾಸಿಯಾದ ಶಾಂಭವಿ ಅವರು ತಮ್ಮ‌ ಮನೆ ಸಮೀಪದ ತೋಟದಿಂದ ಸೋಗೆ ತರುವಾಗ ಹಿಂದಿನಿಂದ ಬಂದಿದ್ದ ಆರೋಪಿ ಅವರ ಸರ ಎಳೆದು ಪರಾರಿಯಾಗಿದ್ದಾನೆ. ಬಳಿಕ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ಇನ್ನು ಆರೋಪಿ ಇರ್ಷಾದ್ ಅತ್ಯಾಚಾರ ಯತ್ನ ಪ್ರಕರಣದಲ್ಲೂ ಭಾಗಿಯಾಗಿ, ಜೈಲು ಪಾಲಾಗಿ ವಾರದ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಜನವರಿ ತಿಂಗಳಲ್ಲಿ ಪೆಟ್ರೋಲ್ ಪಂಪ್ ನಲ್ಲಿ ಕೆಲಸಕ್ಕಿದ್ದ ಯುವತಿಯ ಮೇಲೆ ಅತ್ಯಾಚಾರ ಯತ್ನಿಸಿ ಬಂಧಿತನಾಗಿ ಜೈಲು ಸೇರಿದ್ದ. ಆದರೆ ಹೊರ ಬಂದ ಮೇಲೂ ಅವನು ಬುದ್ಧಿ ಕಳಿತಿರಲಿಲ್ಲ. ಇದೀಗ ಮತ್ತೆ ಜೈಲು ಸೇರಿದ್ದಾನೆ.

- Advertisement -

Latest News

error: Content is protected !!