Thursday, July 18, 2024
Homeಕರಾವಳಿಬೈಕ್ ಸವಾರರಿಗೆ ಬಿಗ್ ರಿಲೀಫ್ : ರಾಜ್ಯದಲ್ಲಿ ಏ.20ರಿಂದ ಸಂಚಾರಕ್ಕೆ ಅನುಮತಿ

ಬೈಕ್ ಸವಾರರಿಗೆ ಬಿಗ್ ರಿಲೀಫ್ : ರಾಜ್ಯದಲ್ಲಿ ಏ.20ರಿಂದ ಸಂಚಾರಕ್ಕೆ ಅನುಮತಿ

spot_img
- Advertisement -
- Advertisement -

ಬೆಂಗಳೂರು : ರಾಜ್ಯದಲ್ಲಿ ಏಪ್ರಿಲ್ 20ರಿಂದ ಬೈಕ್ ಸಂಚಾರಕ್ಕೆ ಅನುಮತಿ ನೀಡಲಾಗುತ್ತಿದೆ. ಈ ಮೂಲಕ ಲಾಕ್ ಡೌನ್ ನಡುವೆಯೂ ಬೈಕ್ ಸವಾರರಿಗೆ ಬಿಗ್ ರಿಲೀಫ್ ನೀಡಲಾಗಿದೆ.

ಈ ಕುರಿತಂತೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ರಾಜ್ಯದಲ್ಲಿ ಏಪ್ರಿಲ್ 20ರ ನಂತ್ರ ಕಟ್ಟಡ ಕಾಮಗಾರಿ, ಐಟಿ-ಬಿಟಿ ಉದ್ಯೋಗ ಆರಂಭಕ್ಕೆ ಅನುಮತಿಯನ್ನು ನೀಡಲಾಗಿದೆ. ಶೇ.33ರಷ್ಟು ಐಟಿ-ಬಿಟಿ ಉದ್ಯೋಗಿಗಳು ಕಾರ್ಯ ನಿರ್ವಹಿಸಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

ಇನ್ನೂ ಮುಂದುವರೆದು, ಕಟ್ಟಡ ಕಾಮಗಾರಿ ಆರಂಭಕ್ಕೆ ಅವಕಾಶವನ್ನು ನೀಡಲಾಗಿದೆ. ಅಲ್ಲದೇ ರಾಜ್ಯಾದ್ಯಂತ ಏಪ್ರಿಲ್ 20ರಿಂದ ದ್ವಿಚಕ್ರ ವಾಹನ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಈ ಅನುಮತಿ ಆಯಾ ಜಿಲ್ಲಾ ವ್ಯಾಪ್ತಿಗೆ ಹೊರತು ಅಂತಹ ಜಿಲ್ಲೆಗಳಿಗೆ ಸಂಚರಿಸಲು ಅಲ್ಲ ಎಂಬುದಾಗಿ ತಿಳಿಸಿದರು

ಮೇ.3ರವರೆಗೆ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಇಲ್ಲ

ರಾಜ್ಯದಲ್ಲಿ ಏಪ್ರಿಲ್ 20ರ ನಂತ್ರ ಲಾಕ್ ಡೌನ್ ಸಡಿಲವಾಗಲಿದೆ. ಆದ್ರೇ ಮದ್ಯ ಮಾರಾಟಕ್ಕೆ ಮಾತ್ರ ರಾಜ್ಯ ಸರ್ಕಾರದಿಂದ ಗ್ರೀನ್ ಸಿಗ್ನಲ್ ನೀಡಿಲ್ಲ. ಮೇ.3ರವರೆಗೆ ರಾಜ್ಯದಲ್ಲಿ ಮದ್ಯ ಮಾರಾಟಕ್ಕೆ ಅನುಮತಿ ಇಲ್ಲ ಎಂಬುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸ್ಪಷ್ಟ ಪಡಿಸುವ ಮೂಲಕ, ಮದ್ಯ ಪ್ರಿಯರಿಗೆ ಬಿಗ್ ಶಾಕ್ ನೀಡಿದ್ದಾರೆ.

ವಿಧಾನ ಸೌಧದದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ರಾಜ್ಯದಲ್ಲಿ ಏಪ್ರಿಲ್ 20 ನಂತ್ರ ದ್ವಿಚಕ್ರ ವಾಹನಗಳ ಸಂಚಾರಕ್ಕೆ ಅನುಮತಿ ನೀಡಲಾಗುತ್ತಿದೆ. ಕಟ್ಟಡ ಕಾಮಗಾರಿ ನಡೆಸಲು ಕೂಡ ಅನುಮತಿ ನೀಡಲಾಗುತ್ತಿದೆ. ಐಟಿ-ಬಿಟಿ ಕಂಪನಿಗಳಲ್ಲಿ ಶೇ.33ರಷ್ಟು ಉದ್ಯೋಗಿಗಳು ಕೆಲಸ ಮಾಡಲು ಅವಕಾಶ ನೀಡಲಾಗುತ್ತಿದೆ ಎಂದು ತಿಳಿಸಿದರು.

ಈ ವೇಳೆ ಮದ್ಯ ಮಾರಾಟಕ್ಕೆ ಯಾವಾಗ ಅನುಮತಿ ನೀಡಲಾಗುತ್ತದೆ ಎಂಬ ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಮೇ.3ರವರೆಗೆ ಮದ್ಯ ಮಾರಾಟಕ್ಕೆ ಅನುಮತಿ ಇಲ್ಲ. ಮೇ.3ರ ನಂತ್ರ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂಬುದಾಗಿ ಹೇಳಿದರು. ಈ ಮೂಲಕ ಮದ್ಯ ಪ್ರಿಯರಿಗೆ ಬಿಗ್ ಶಾಕ್ ನೀಡಿದರು.

- Advertisement -
spot_img

Latest News

error: Content is protected !!