- Advertisement -
- Advertisement -
ಉತ್ತರ ಪ್ರದೇಶದ ಹತ್ರಾಸ್ ನಲ್ಲಿ ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಅಕ್ರಮ ಸಂಬಂಧ ಹೊರ ಬರುತ್ತೆ ಎಂಬ ಭಯಕ್ಕೆ ಅಕ್ಕನೊಬ್ಬಳು ತನ್ನ ತಮ್ಮನನ್ನೇ ಹತ್ಯೆಗೈದಿದ್ದಾಳೆ. ಗೋಧಿ ಹೊಲದಲ್ಲಿ ಬಾಲಕನ ಅಸ್ಥಿಪಂಜರ ಸಿಕ್ಕಿತ್ತು. ಇದ್ರ ತನಿಖೆ ಶುರು ಮಾಡಿದ್ದ ಪೊಲೀಸರು ದಂಗಾಗಿದ್ದರು.
ಏಪ್ರಿಲ್ 3ರಂದು ಬಾಲಕನ ಅಸ್ಥಿಪಂಜರ ಸಿಕ್ಕಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ವಿಚಾರಣೆ ಶುರು ಮಾಡಿದ್ದರು. ವಿಚಾರಣೆ ವೇಳೆ ಅಸ್ಥಿಪಂಜರ ಯಾರದ್ದು ಎಂಬುದು ಗೊತ್ತಾಯ್ತು. ನಂತ್ರ ಬಾಲಕನ ಅಕ್ಕ, ಪ್ರೇಮಿ ಜೊತೆ ಸೇರಿ ಆತನನ್ನು ಹತ್ಯೆ ಮಾಡಿದ್ದಾಳೆಂದು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಪ್ರೇಮಿ ಜೊತೆ ಆರೋಪಿ ಅಕ್ಕ ಅಕ್ರಮ ಸಂಬಂಧ ಬೆಳೆಸುವ ವೇಳೆ ತಮ್ಮ ನೋಡಿದ್ದನಂತೆ. ಆತ ಮನೆಗೆ ವಿಷ್ಯ ಹೇಳ್ತಾನೆಂಬ ಭಯದಲ್ಲಿ ಅಕ್ಕ, ತಮ್ಮನನ್ನೇ ಹತ್ಯೆಗೈದಿದ್ದಾಳೆ.
- Advertisement -