ಭೂಪಾಲ್, ಏ.18- ಕೊರೊನಾ ಹಾವಳಿಯಿಂದ ಜಾರಿಯಲ್ಲಿರುವ ಲಾಕ್‍ಡೌನ್ ವೇಳೆ ಕಾಮುಕನೊಬ್ಬ ಅಪಾರ್ಟ್‍ಮೆಂಟ್‍ಗೆ ನುಗ್ಗಿ 53 ವರ್ಷದ ಬ್ಯಾಂಕ್ ವ್ಯವಸ್ಥಾಪಕಿಯೊಬ್ಬರ ಮೇಲೆ ಅತ್ಯಾಚಾರ ಎಸಗಿರುವ ಘಟಕ ಮಧ್ಯಪ್ರದೇಶದ ರಾಜಧಾನಿ ಭೂಪಾಲ್‍ನ ಶಹಪುರ್‍ದಲ್ಲಿ ನಡೆದಿದೆ.
ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯು ದೃಷ್ಟಿಚೇತನ ಮಹಿಳೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆಯಿಂದ ಲಾಕ್‍ಡೌನ್ ವೇಳೆ ಏಕಾಂಗಿ ಮಹಿಳೆಯರ ಸುರಕ್ಷತೆ ಮತ್ತು ಭದ್ರತೆ ಬಗ್ಗೆ ಆತಂಕ ವ್ಯಕ್ತವಾಗಿದೆ. ಸಂತ್ರಸ್ತೆ ಮಹಿಳೆ ಕೆಲವು ದಿನಗಳಿಂದ ಶಹಪುರದ ಮೂರು ಅಂತಸ್ತುಗಳ ಅಪಾರ್ಟ್‍ಮೆಂಟ್‍ನಲ್ಲಿ ಏಕಾಂಗಿಯಾಗಿದ್ದರು.
ಸಂತ್ರಸ್ತೆಯ ಪತಿ ರಾಜಸ್ಥಾನದ ಸಿರೋಹಿ ಜಿಲ್ಲೆಯಲ್ಲಿ ತನ್ನ ಗ್ರಾಮಕ್ಕೆ ಹೋಗಿದ್ದರು. ಆದರೆ ಕೊರೊನಾದಿಂದ ಇಡೀ ದೇಶವೇ ಲಾಕ್‍ಡೌನ್ ಆಗಿದೆ. ಇದರಿಂದ ಪತಿ ಅಲ್ಲಿಯೇ ಸಿಲುಕಿಕೊಂಡಿದ್ದಾರೆ. ಹೀಗಾಗಿ ಸಂತ್ರಸ್ತೆ ಮೂರು ಮಹಡಿಯನ್ನು ಹೊಂದಿರುವ ಫ್ಲಾಟ್‍ನಲ್ಲಿ ಎರಡನೇ ಮಹಡಿಯಲ್ಲಿ ಒಬ್ಬರೇ ವಾಸಿಸುತ್ತಿದ್ದರು.
ಶುಕ್ರವಾರ ಮುಂಜಾನೆ ಮಹಿಳೆ ತುಂಬಾ ಸೆಕೆಯಾಗುತ್ತಿದೆ ಎಂದು ಬಾಲ್ಕನಿಯ ಬಾಗಿಲುಗಳನ್ನು ತೆರೆದಿಟ್ಟು ಮಲಗಿದ್ದರು. ಈ ವೇಳೆ ಶಂಕಿತ ಮೆಟ್ಟಿಲಿನಿಂದ ಎರಡನೇ ಮಹಡಿಗೆ ನಡೆದುಕೊಂಡು ಹೋಗಿದ್ದು, ಅಲ್ಲಿ ಬಾಗಿಲು ತೆರೆದಿದ್ದ ಬಾಲ್ಕನಿಯಿಂದ ಫ್ಲಾಟ್‍ಗೆ ನುಗ್ಗಿದ್ದಾನೆ ಎಂದು ಪೊಲೀಸ್ ಅಧಿಕಾರಿ ಸಂಜಯ್ ಸಾಹು ತಿಳಿಸಿದ್ದಾರೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಕೊರೊನಾ ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ರಾಜ್ಯಾದ್ಯಂತ ಲಾಕ್‍ಡೌನ್ ಅತ್ಯಂತಿ ಬಿಗಿಯಾಗಿರುವಾಗಲೇ ಈ ಕೃತ್ಯ ನಡೆದಿರುವುದು ಏಕಾಂಗಿ ಮಹಿಳೆಯರ ಸುರಕ್ಷತೆಗೆ ಬಗ್ಗೆ ಆತಂಕ ಸೃಷ್ಟಿಸಿದೆ.
