Tuesday, October 13, 2026
Homeತಾಜಾ ಸುದ್ದಿಮದುವೆ ಊಟ ಹಾಕಿಸುವ ಸೂಚನೆ ಕೊಟ್ರು ಶೈನ್ ಶೆಟ್ಟಿ, ಹುಡುಗಿ ಯಾರು ಗೊತ್ತಾ?

ಮದುವೆ ಊಟ ಹಾಕಿಸುವ ಸೂಚನೆ ಕೊಟ್ರು ಶೈನ್ ಶೆಟ್ಟಿ, ಹುಡುಗಿ ಯಾರು ಗೊತ್ತಾ?

- Advertisement -
- Advertisement -

ಬೆಂಗಳೂರು : ಬಿಗ್ ಬಾಸ್ ಮನೆಯಲ್ಲಿ ದೀಪಿಕಾ-ಶೈನ್ ಅವರು ನೋಡಿ ಅವರ ಅಭಿಮಾನಿಗಳು ನೀವಿಬ್ಬರೂ ಜೋಡಿಯಾದ್ರೆ ಚೆನ್ನಾಗಿರುತ್ತೆ ಅಂತಾ ಪದೇ ಪದೇ ಹೇಳುತ್ತಲೇ ಇದ್ದರೂ. ಈಗಲೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಶೈನ್ ಹಾಗೂ ದೀಪಿಕಾ ಅವರನ್ನು ಜೊತೆಯಾಗಿ ಕಂಡ್ರೆ ಅಭಿಮಾನಿಗಳು ಅದೇ ಮಾತನ್ನು ಹೇಳುತ್ತಿರುತ್ತಾರೆ.

ಇದೀಗ ಶೈನ್ ಶೆಟ್ಟಿ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿರುವ ವಿಡಿಯೋ ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ. ಶೈನ್ ಒಂದು ಕಾಫಿ ಶಾಪ್‍ನಲ್ಲಿ ಕುಳಿತಿದ್ದು, ಟೇಬಲ್ ಮೇಲೆ ಒಂದು ಕಪ್ ಕಾಫಿ ಮತ್ತು ಒಂದು ಪುಸ್ತಕ ಇರುವುದನ್ನು ಕಾಣಬಹುದಾಗಿದೆ. ಜೊತೆಗೆ ಶೈನ್ ಎದುರು ಯಾವುದೋ ಹುಡುಗಿ ಕುಳಿತಿದ್ದಾರೆ. ಆದರೆ ವಿಡಿಯೋದಲ್ಲಿ ಹುಡುಗಿ ಯಾರೆಂಬುದು ಕಾಣಿಸುವುದಿಲ್ಲ.

ಪದೇ ಪದೇ ಶೈನ್ ಮದುವೆ ಬಗ್ಗೆ ಪ್ರಶ್ನೆ ಕೇಳುತ್ತಿದ್ದ ಅಭಿಮಾನಿಗಳಿಗೆ ಈ ವಿಡಿಯೋ ತಲೆಯಲ್ಲಿ ಹುಳು ಬಿಟ್ಟಿದೆ. ಅನೇಕರು ಅದು ದೀಪಿಕಾನೇ ಆಗಿರಲಿ ಅಂತಾ ಕಾಮೆಂಟ್ ಮಾಡಿದ್ದಾರೆ. ಆದ್ರೆ ಆ ಎಲ್ಲಾ ಕುತೂಹಲಕ್ಕೆ ಶೈನ್ ಅವರೇ ತೆರೆ ಎಳೆಯಬೇಕಿದೆ.

- Advertisement -

Latest News

error: Content is protected !!