Sunday, June 7, 2026
Homeಕರಾವಳಿಮಂಗಳೂರಿನ ಚಿನ್ನದಂಗಡಿಯಲ್ಲಿ ಹಾಡಹಗಲೇ ಚಿನ್ನ ಕದ್ದ ಕಳ್ಳ: ಖದೀಮನ ಕೈಚಳಕ ಸಿಸಿ ಟಿವಿಯಲ್ಲಿ ಸೆರೆ

ಮಂಗಳೂರಿನ ಚಿನ್ನದಂಗಡಿಯಲ್ಲಿ ಹಾಡಹಗಲೇ ಚಿನ್ನ ಕದ್ದ ಕಳ್ಳ: ಖದೀಮನ ಕೈಚಳಕ ಸಿಸಿ ಟಿವಿಯಲ್ಲಿ ಸೆರೆ

- Advertisement -
- Advertisement -

ಮಂಗಳೂರು:  ಚಿನ್ನ ಖರೀದಿಸುವ ನೆಪದಲ್ಲಿ ಚಿನ್ನದಂಗಡಿ ಬಂದ ಕಳ್ಳನೊಬ್ಬ ಚಿನ್ನ ಕದ್ದು ಎಸ್ಕೇಪ್ ಆಗುವ ವೇಳೆ ಸಿಕ್ಕಿ ಬಿದ್ದ ಘಟನೆ ಮಂಗಳೂರಿನಲ್ಲಿ ನಡೆದಿದೆ.

 ಹಾ ಮಂಗಳೂರು ನಗರದ ಹೃದಯ ಭಾಗದಲ್ಲಿರುವ ಕಾರಸ್ಟ್ರೀಟ್ ನಲ್ಲಿರುವ ಅರುಣ್ ಶೇಟ್ ಜ್ಯುವೆಲ್ಸ್ ಆಂಡ್ ಡೈಮಂಡ್ ವರ್ಕ್ಸ್ ಎಂಬ ಅಂಗಡಿಗೆ ನಿನ್ನೆ ಮಧ್ಯಾಹ್ನ 2 ಗಂಟೆಗೆ ವ್ಯಕ್ತಿಯೊಬ್ಬ ಚಿನ್ನದ ಖರೀದಿ ನೆಪದಲ್ಲಿ ಬಂದಿದ್ದಾನೆ. ಹಾಗೇ ಬಂದವನು ಉಂಗುರ ಖರೀದಿಸುತ್ತೇನೆಂದು ಹೇಳಿ ಉಂಗುರವನ್ನು ಧರಿಸಿ ನೋಡಿ ಅದನ್ನು ಹಾಕಿಕೊಂಡೇ ಪರಾರಿಯಾಗಿದ್ದಾನೆ.

ಇನ್ನು  ಕಳ್ಳತನ ಮಾಡಿ ಓಡಿ ಹೋಗುವಾಗ ಕಳ್ಳನನ್ನು ಅಟ್ಟಿಸಿಕೊಂಡು ಹೋದ ಅಂಗಡಿ ಮಾಲೀಕ ಅರುಣ್ ಜಿ. ಶೇಟ್ ಜನರ  ಸಹಕಾರದಿಂದ ಆತನನ್ನು ಹಿಡಿದು ಬಂದರು ಪೊಲೀಸ್ ಠಾಣೆಗೆ ಒಪ್ಪಿಸಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇನ್ನು ಈತ ಕಳ್ಳತನ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

- Advertisement -

Latest News

error: Content is protected !!