Wednesday, May 1, 2024
Homeತಾಜಾ ಸುದ್ದಿಎಂಥೆಂಥಾ ಹುಚ್ಚಾರಿದ್ದಾರೆ ನೋಡಿ: ಚಾಲೆಂಜ್ ಗಾಗಿ ತನ್ನ ಗುಪ್ತಾಂಗವನ್ನೇ ಕೊಯ್ದುಕೊಂಡ ಶಿಕ್ಷಕ

ಎಂಥೆಂಥಾ ಹುಚ್ಚಾರಿದ್ದಾರೆ ನೋಡಿ: ಚಾಲೆಂಜ್ ಗಾಗಿ ತನ್ನ ಗುಪ್ತಾಂಗವನ್ನೇ ಕೊಯ್ದುಕೊಂಡ ಶಿಕ್ಷಕ

spot_img
- Advertisement -
- Advertisement -

ಆನ್ಲೈನ್ನಲ್ಲಿ ಬೇರೆ ಬೇರೆ ರೀತಿಯ ಚಾಲೆಂಜ್ ಗಳನ್ನು ನಾವು ನೋಡ್ತಾನೆ ಇರ್ತಿವಿ. ಆದ್ರೆ ಇಂತಹ ಹುಚ್ಚು ಸಾಹಸ ಮಾತ್ರ ಯಾರೂ ಮಾಡಿರಲ್ಲ. ಹೌದು.. ಇಂಟರ್ನೆಟ್ ಚಾಲೆಂಜ್ ಸ್ವೀಕರಿಸಿದ ಶಿಕ್ಷಕನೊಬ್ಬ ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ತನ್ನ ಗುಪ್ತಾಂಗವನ್ನೇ ಕತ್ತರಿಸಿಕೊಂಡಿದ್ದಾನೆ.

ಈ ರೀತಿ ಗುಪ್ತಾಂಗ ಕಟ್ ಮಾಡಿಕೊಂಡ ವಿಡಿಯೋ ಹಾಕಿದರೆ ಯೂಟ್ಯೂಬ್ನಲ್ಲಿ ಉತ್ತಮ ಹಿಟ್ಸ್ ಬರುತ್ತದೆ ಎಂಬುದು ಅವನ ಲೆಕ್ಕಾಚಾರವಾಗಿತ್ತು! ಆದರೆ ಆ ಲೆಕ್ಕಾಚಾರ ಉಲ್ಟಾ ಹೊಡೆದು ಆತನ ಪ್ರಾಣಕ್ಕೇ ಸಂಚಕಾರ ತರುವ ಮಟ್ಟಕ್ಕೆ ಹೋಗಿತ್ತು. ಅದೃಷ್ಟವಶಾತ್ ಆತ ಬದುಕುಳಿದಿದ್ದು, ಆಪರೇಷನ್ ಮಾಡಿ ಗುಪ್ತಾಂಗವನ್ನು ಪುನಃ ಜೋಡಿಸಲಾಗಿದೆ. ಗುಪ್ತಾಂಗವನ್ನು ಕಟ್ ಮಾಡಿಕೊಳ್ಳಲು ತನ್ನ ರೂಂ ಮೇಟ್ ಸಹಾಯ ಪಡೆದ ಶಿಕ್ಷಕ ಚಾಕುವಿನಿಂದ ಗುಪ್ತಾಂಗ ಕಟ್ ಮಾಡಿಕೊಂಡಿದ್ದಾನೆ.

ಇನ್ನು ರ್ಯಾಪರ್ ಬೆಲ್ಟ್ರಾನ್ನ ಪ್ರಭಾವದಿಂದ ಈ ಕೃತ್ಯ ನಡೆದಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಯೂಟ್ಯೂಬ್ ವೀಡಿಯೋ ನೋಡಿ ಆ ಶಿಕ್ಷಕ ಈ ರೀತಿ ಮಾಡಿದ್ದು, ತಾನು ಕೂಡ ಅದೇ ರೀತಿಯ ವಿಡಿಯೋ ಶೂಟ್ ಮಾಡಿದರೆ ಯೂಟ್ಯೂಬ್ನಲ್ಲಿ ಹಣ ಗಳಿಸಬಹುದು ಎಂದು ಹೀಗೆ ಮಾಡಿದ್ದಾಗಿ ಆತ ಪೊಲೀಸರ ಮುಂದೆ ಹೇಳಿದ್ದಾನೆ.

ಅಂದಹಾಗೆ, ಗುಪ್ತಾಂಗ ಕಟ್ ಮಾಡಿಕೊಂಡಿರುವ ವ್ಯಕ್ತಿ ಯಾವುದೋ ಅಶಿಕ್ಷಿತನಲ್ಲ. ಆತ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ಡಿಗ್ರಿ ಪಡೆದು ಶಿಕ್ಷಕನಾಗಿರುವ ವ್ಯಕ್ತಿಯಾಗಿದ್ದಾನೆ. ಆತನ ಹೆಸರು ಆಂಡ್ರ್ಯೂ ಬ್ರೀಚ್. ಈತ ತನ್ನ ಗುಪ್ತಾಂಗ ಕತ್ತರಿಸಿಕೊಂಡಿರುವ ವೀಡಿಯೋವನ್ನು ರೆಕಾರ್ಡ್ ಮಾಡಿ, ಯೂಟ್ಯೂಬ್ನಲ್ಲಿ ಅಪ್ಲೋಡ್ ಮಾಡಿದ್ದಾನೆ. ರಕ್ತಸ್ರಾವದಿಂದ ನರಳುತ್ತಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬೇರ್ಪಟ್ಟಿದ್ದ ಗುಪ್ತಾಂಗವನ್ನು ಆಪರೇಷನ್ ಮಾಡಿ ಜೋಡಿಸಲಾಗಿದೆ.

- Advertisement -
spot_img

Latest News

error: Content is protected !!