Saturday, June 6, 2026
Homeಕರಾವಳಿಹುಟ್ಟುಹಬ್ಬದಂದೇ ಬಾಲಕಿಯ ಪಾಲಿಗೆ ಯಮನಾದ ಉಯ್ಯಾಲೆ: ಕತ್ತಿಗೆ ಉಯ್ಯಾಲೆ ಸುತ್ತಿ‌ ವಿದ್ಯಾರ್ಥಿನಿ ಸಾವು

ಹುಟ್ಟುಹಬ್ಬದಂದೇ ಬಾಲಕಿಯ ಪಾಲಿಗೆ ಯಮನಾದ ಉಯ್ಯಾಲೆ: ಕತ್ತಿಗೆ ಉಯ್ಯಾಲೆ ಸುತ್ತಿ‌ ವಿದ್ಯಾರ್ಥಿನಿ ಸಾವು

- Advertisement -
- Advertisement -

ಸುಳ್ಯ : ಉಯ್ಯಾಲೆಯಾಡುತ್ತಿದ್ದಾಗ ಕುತ್ತಿಗೆಗೆ ಬಿಗಿದು ಬಾಲಕಿಯೋರ್ವಳು ಮೃತಪಟ್ಟ ಹೃದಯ ವಿದ್ರಾವಕ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಏನೆಕಲ್ಲು ಗ್ರಾಮದಲ್ಲಿ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಏನೆಕಲ್ಲು ಗ್ರಾಮದ ಮುತ್ಲಾಜಡ್ಕದ ಬಾಬು ಅಜಿಲರ ಪುತ್ರಿ ಶೃತಿ(11)ಮೃತ ಬಾಲಕಿ.

ಶೃತಿ 5ನೇ ತರಗತಿಯಲ್ಲಿ ಓದುತ್ತಿದ್ದು ಇಂದು ಆಕೆಯ ಹುಟ್ಟು ಹಬ್ಬವಾಗಿದ್ದರಿಂದ ಶಾಲೆಗೆ ಹೋಗಿರಲಿಲ್ಲ. ಮನೆಯ ಸಮೀಪದ ಪೇರಳೆ ಮರದಲ್ಲಿ ಸೀರೆಯಲ್ಲಿ ಕಟ್ಟಿದ ಉಯ್ಯಾಲೆಯಾಡುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ.

ಬಾಲಕಿಯ ಮೃತದೇಹವನ್ನು ಮೊದಲು ಸುಬ್ರಹ್ಮಣ್ಯ ಆಸ್ಪತ್ರೆಗೆ ಸಾಗಿಸಿದ್ದು ಅಲ್ಲಿ ವೈದ್ಯರು ಇಲ್ಲದಿದ್ದ ಕಾರಣ ಸುಳ್ಯ ಆಸ್ಪತ್ರೆಗೆ ಶವ ಪರೀಕ್ಷೆಗೆ ತರಲಾಗಿದೆ. ಈ ಬಗ್ಗೆ ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!