- Advertisement -


- Advertisement -
ಮಂಗಳೂರು: ರಾಷ್ಟ್ರೀಯ ಭದ್ರತಾ ದಳವು (NSG) ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಭಯೋತ್ಪಾದನಾ ನಿಗ್ರಹ ಅಣಕು ಕಾರ್ಯಾಚರಣೆ ನಡೆಸುತ್ತಿದ್ದು, ಇದರ ಭಾಗವಾಗಿ ಗುರುವಾರ ಬೆಳಿಗ್ಗೆ ಮಂಗಳೂರು ನಗರದ ವಿವಿಧೆಡೆ ಹೆಲಿಕಾಪ್ಟರ್ ತೀರ ಕೆಳಮಟ್ಟದಲ್ಲಿ ಹಾರಾಟ ನಡೆಸಿತು.
ಮುನ್ಸೂಚನೆ ಇಲ್ಲದೆ ನಡೆದ ಈ ಹಾರಾಟದಿಂದಾಗಿ ಸಾರ್ವಜನಿಕರಲ್ಲಿ ಆರಂಭದಲ್ಲಿ ಆತಂಕ ಮತ್ತು ಸಂಚಲನ ಮೂಡಿತ್ತು.
ಆದರೆ, ಇದು ಎನ್‌ಎಸ್‌ಜಿ ಪಡೆಯ ಕಾರ್ಯಕ್ಷಮತೆ ಪರಿಶೀಲನೆಗಾಗಿ ಹಮ್ಮಿಕೊಂಡಿರುವ ಕೇವಲ ಅಣಕು ಕಾರ್ಯಾಚರಣೆಯಾಗಿದ್ದು, ನಾಗರಿಕರು ಯಾವುದೇ ಕಾರಣಕ್ಕೂ ಗಾಬರಿಪಡುವ ಅಗತ್ಯವಿಲ್ಲ ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
- Advertisement -


