Saturday, October 17, 2026
Homeಅಪರಾಧಗೋಲ್ಡ್‌ ಸ್ಮಗ್ಲಿಂಗ್‌ ಪ್ರಕರಣ; ನಟಿ ರನ್ಯಾ ರಾವ್‌ಗೆ ಬಿಗ್‌ ಶಾಕ್‌ ನೀಡಿದ ಡಿಆರ್‌ಐ

ಗೋಲ್ಡ್‌ ಸ್ಮಗ್ಲಿಂಗ್‌ ಪ್ರಕರಣ; ನಟಿ ರನ್ಯಾ ರಾವ್‌ಗೆ ಬಿಗ್‌ ಶಾಕ್‌ ನೀಡಿದ ಡಿಆರ್‌ಐ

- Advertisement -
- Advertisement -

ಬೆಂಗಳೂರು: ನಟಿ ರನ್ಯಾರಾವ್‌ಗೆ ಡಿಆರ್‌ಐ ಅಧಿಕಾರಿಗಳು ನೋಟಿಸ್‌ ನೀಡುವ ಮೂಲಕ ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌ನಲ್ಲಿ ಬಿಗ್‌ ಶಾಕ್‌ ಎದುರಾಗಿದ್ದು, 102.55 ಕೋಟಿ ರೂ ದಂಡ ಪಾವತಿಸುವಂತೆ ನೀಡಿದ್ದಾರೆ.

ನಟಿ ಅಕ್ರಮವಾಗಿ 127.3 ಕೆಜಿ ಚಿನ್ನ ಸಾಗಣೆ ಮಾಡಿದ್ದು, ಇಂದು ಜೈಲಿಗೆ ತೆರಳಿ ನೋಟಿಸ್‌ ನೀಡಲಿರುವ ಅಧಿಕಾರಿಗಳು ದಂಡ ಪಾವತಿ ಮಾಡದಿದ್ದರೆ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಇನ್ನು ಪ್ರಕರಣದ ಎ2 ಆರೋಪಿ ತರುಣ್‌ ಕೊಂಡೂರು ರಾಜುಗೆ 62 ಕೋಟಿ ರೂ ದಂಡ ವಿಧಿಸಲಾಗಿದೆ. ಅದೇ ರೀತಿ ಪ್ರಕರಣದ ಇನ್ನುಳಿದ ಆರೋಪಿಗಳಾದ ಭರತ್‌ ಜೈನ್‌, ಸಾಹಿಲ್‌ ಜೈನ್‌ಗೂ ದಂಡ ಪಾವತಿಸುವಂತೆ ನೋಟಿಸ್‌ ನೀಡಲಾಗಿದೆ.

ಸ್ಯಾಂಡಲ್‌ವುಡ್‌ ನಟಿ ರನ್ಯಾರಾವ್‌ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಅಕ್ರಮವಾಗಿ ಚಿನ್ನ ಸಾಗಾಟ ಮಾಡಿದ ಹಿನ್ನೆಲೆಯಲ್ಲಿ ಅವರನ್ನು ಪೊಲೀಸರು ಬಂಧಿಸಿದ್ದರು. ದುಬೈನಿಂದ ಅಕ್ರಮ ಚಿನ್ನ ಸಾಗಾಟ ಮಾಡಿ ಕೆಂಪೇಗೌಡ ಅಂತರಾಷ್ಟ್ರೀಯ ಏರ್‌ಪೋರ್ಟ್‌ನಲ್ಲಿ ಸಿಕ್ಕಿಹಾಕಿಕೊಂಡಿದ್ದರು.

- Advertisement -

Latest News

error: Content is protected !!