Wednesday, June 24, 2026
Homeಕರಾವಳಿಉಡುಪಿಉಡುಪಿಯಲ್ಲಿ ಹೋಂ ಕ್ವಾರಂಟೈನ್ ನಲ್ಲಿದ್ದ ಬಾಲಕಿ ನೇಣಿಗೆ ಶರಣು

ಉಡುಪಿಯಲ್ಲಿ ಹೋಂ ಕ್ವಾರಂಟೈನ್ ನಲ್ಲಿದ್ದ ಬಾಲಕಿ ನೇಣಿಗೆ ಶರಣು

- Advertisement -
- Advertisement -

ಉಡುಪಿ: ಹೋಂ ಕ್ವಾರಂಟೈನ್‌ನಲ್ಲಿದ್ದ ಬಾಲಕಿ ನೇಣಿಗೆ ಶರಣಾಗಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕು ಕಿರಿಮಂಜೆಶ್ವರ ಕೊಡೇರಿಯಲ್ಲಿ ನಡೆದಿದೆ. ಇಲ್ಲಿಯ ನಿವಾಸಿ ತನ್ವಿತಾ (12) ಮೃತಪಟ್ಟ ಬಾಲಕಿ.

ಬಾಲಕಿಯ ಮನೆಯವರಿಗೆ ಕೊರೊನಾ ಪಾಸಿಟಿವ್ ಆಗಿದ್ದ ಹಿನ್ನೆಲೆಯಲ್ಲಿ ಎಲ್ಲರೂ ಚಿಕಿತ್ಸೆ ಪಡೆಯುತ್ತಿದ್ದರು. ಇವರ ಪ್ರಾಥಮಿಕ ಸಂಪರ್ಕದಲ್ಲಿದ್ದ ಕಾರಣ ಮನೆಯಲ್ಲಿ ಇದ್ದವರು ಹೋಂ ಕ್ವಾರಂಟೈನ್ ಆಗಿದ್ದರು. ಬಾಲಕಿ ಕೂಡ ಕ್ವಾರಂಟೈನ್‌ ಆಗಿದ್ದಳು.

ಕೊರೊನಾ ಭೀತಿಯಿಂದ ಎಲ್ಲರೊಂದಿಗೆ ಬೆರೆಯಲು, ಚಿಕ್ಕ‌ಮಗುವನ್ನು ಮುಟ್ಟಲು, ಹೊರಗೆ ಹೋಗಲು ಬಾಲಕಿಗೆ ಕುಟುಂಬಸ್ಥರು ನಿರ್ಬಂಧ ವಿಧಿಸಿದ್ದರು. ಮನೆಯೊಳಕ್ಕೇ ಇರುವಂತೆ ಹೇಳಿದ್ದರು. ಇದರಿಂದ ಮನನೊಂದ ತನ್ವಿತಾ ಮನೆಯ ಮಹಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಬೈಂದೂರು ಠಾಣೆಯಲ್ಲಿ ಈ‌ ಕುರಿತು ಪ್ರಕರಣ ದಾಖಲು ಮಾಡಲಾಗಿದೆ.

- Advertisement -

Latest News

error: Content is protected !!