Wednesday, June 24, 2026
Homeಕರಾವಳಿಬೆಳ್ತಂಗಡಿ: ನದಿಯಲ್ಲಿ ಮುಳುಗಿ ಯುವಕ ನೀರುಪಾಲು

ಬೆಳ್ತಂಗಡಿ: ನದಿಯಲ್ಲಿ ಮುಳುಗಿ ಯುವಕ ನೀರುಪಾಲು

- Advertisement -
- Advertisement -

ಬೆಳ್ತಂಗಡಿ: ಪಾಲ್ಗುಣಿ ನದಿಯಲ್ಲಿ ಲಾಕ್ ಡೌನ್ ಇದ್ದ ಕಾರಣ ಸ್ಥಳೀಯ ಯುವಕ ತಂಡ ಇಜಾಡಲು ಹೋಗಿ ಈ ವೇಳೆ ಒಬ್ಬ ನೀರಿನ ಸೆಳೆತಕ್ಕೆ ಸಿಲುಕಿ ಸಾವನ್ನಪ್ಪಿದ ಘಟನೆ ಬೆಳ್ತಂಗಡಿ ತಾಲೂಕಿನ ಪಡಂಗಡಿ ಗ್ರಾಮದ ಪಾಲ್ಗುಣಿ ನದಿಯಲ್ಲಿ ನಡೆದಿದೆ.

ಮೃತ್ತಪಟ್ಟ ಯುವಕ ಪಡಂಗಡಿ ಗ್ರಾಮದ ಕೊಡ್ಡಂತ್ತಾಡಿ ನಿವಾಸಿ ದುಗ್ಗಪ್ಪ ಮೂಲ್ಯ ಎಂಬವರ ಮಗ ವೃತ್ತಿಯಲ್ಲಿ ಟ್ಯಾಪಿಂಗ್ ಕೆಲಸ ಮಾಡುತ್ತಿದ್ದ ನಿಶಾಂತ್(27).

ನೀರಿನ ಸುಳಿಗೆ ಸಿಲುಕಿ ಒದ್ದಾಡುತ್ತಿದ್ದ ಬಳಿಕ ಉಳಿದ ಯುವಕರು ರಕ್ಷಣೆಗೆ ಧಾವಿಸಿ ನಿಶಾಂತ್ ನನ್ನು ಮೇಲಾಕ್ಕೆ ತಂದಿದ್ದಾರೆ ಬಳಿಕ ಆಂಬುಲೆನ್ಸ್ ಮೂಲಕ ಸ್ಥಳೀಯ ಖಾಸಗಿ ಆಸ್ಪತ್ರೆಗೆ ತಂದಿದ್ದಾರೆ ಈ ವೇಳೆ ನಿಶಾಂತ್ ಸಾವನ್ನಪ್ಪಿದ್ದಾನೆ. ಶವ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!