Thursday, June 25, 2026
Homeಮನರಂಜನೆಬಿಗ್ ಬಾಸ್ ಕನ್ನಡ ಸೀಸನ್ 12 ರ ವಿನ್ನರ್ ಪಟ್ಟ ಮುಡಿಗೇರಿಸಿಕೊಂಡ ಗಿಲ್ಲಿ ನಟ; ಫಸ್ಟ್...

ಬಿಗ್ ಬಾಸ್ ಕನ್ನಡ ಸೀಸನ್ 12 ರ ವಿನ್ನರ್ ಪಟ್ಟ ಮುಡಿಗೇರಿಸಿಕೊಂಡ ಗಿಲ್ಲಿ ನಟ; ಫಸ್ಟ್ ರನ್ನರ್ ಅಪ್ ಆದ ಕರಾವಳಿ ಪೋರಿ ರಕ್ಷಿತಾ ಶೆಟ್ಟಿ

- Advertisement -
- Advertisement -

ಬೆಂಗಳೂರು; ಬಿಗ್ಬಾಸ್ ಕನ್ನಡ ಸೀಸನ್ 12ಕ್ಕೆ ಅದ್ಧೂರಿ ತಕೆರೆ ಬಿದ್ದಿದೆ. ನಿರೀಕ್ಷೆಯಂತೆ  ಈ ಸೀಸನ್ ನ ವಿನ್ನರ್ ಆಗಿ ಗಿಲ್ಲಿ ನಟ ಹೊರ ಹೊಮ್ಮಿದ್ದಾರೆ. ಗಿಲ್ಲಿ ನಟ 40 ಕೋಟಿಗೂ ಅಧಿಕ ವೋಟ್ ಪಡೆದು ಗೆಲುವು ಸಾಧಿಸಿದ್ದಾರೆ.

ಇನ್ನು ಕರಾವಳಿ ಪೋರಿ ಮಾತಿನ ಮಲ್ಲಿ ರಕ್ಷಿತಾ ಶೆಟ್ಟಿ ಫಸ್ಟ್ ರನ್ನರ್ ಅಪ್ ಆಗಿದ್ದಾರೆ. ಕಳೆದ ಬಾರಿಯ ವಿನ್ನರ್ ಹನುಮಂತ 5 ಕೊಟಿ ವೋಟ್ ಪಡೆದಿದ್ದರು. ಇದಕ್ಕಿಂತ ಹತ್ತು ಪಟ್ಟು ವೋಟ್​​ನ ಗಿಲ್ಲಿ ಪಡೆದುಕೊಂಡಿದ್ದಾರೆ ಎಂಬುದು ವಿಶೇಷ.

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ ಅವರು ಎಂಟ್ರಿ ಕೊಟ್ಟಾಗಲೇ ಕ್ರೇಜ್ ನಿಧಾನಕ್ಕೆ ಆರಂಭ ಆಯಿತು. ಯಾವಾಗ ಅಶ್ವಿನಿ ಜೊತೆ ಅವರು ಸೆಣೆಸಾಟಕ್ಕೆ ಇಳಿದರೋ ಆಗ ಅವರ ಕ್ರೇಜ್ ಹೆಚ್ಚುತ್ತಾ ಹೋಯಿತು. ಅವರು ಕೊಡೋ ತಿರುಗೇಟಿಗೆ ಎಲ್ಲರೂ ಫಿದಾ ಆದರು. ಪ್ರತಿ ಹಂತದಲ್ಲೂ ಹಾಸ್ಯ ಮಾಡುತ್ತಾ ಮನರಂಜನೆ ನೀಡಿದರು. ಈ ಕಾರಣದಿಂದ ಗಿಲ್ಲಿ ನಟ ಎಲ್ಲರಿಗೂ ಇಷ್ಟ ಆದರು. ಸಾಮಾನ್ಯರಿಂದ ಹಿಡಿದು ಸೆಲೆಬ್ರಿಟಿಗಳವರೆಗೆ ಎಲ್ಲರೂ ಗಿಲ್ಲಿಯ ಅಭಿಮಾನಿ ಆದರು. ನಂತರದಲ್ಲಿ ಅವರಿಗೆ ಕಾಂಪಿಟೇಟರ್ ಇಲ್ಲ ಎಂಬಂತಾಯಿತು. ಕೊನೆಗೂ ಅವರು ಗೆದ್ದು ಬೀಗಿದ್ದಾರೆ. ಗಿಲ್ಲಿಗೆ 50 ಲಕ್ಷ ಕ್ಯಾಶ್ ಪ್ರೈಸ್ ಸಿಕ್ಕಿದೆ. ಇದರ ಜೊತೆಗೆ ಮಾರುತಿ ಸುಜುಕಿ ವಿಕ್ಟರಿಸ್ ಕಾರ್ ಅವರ ಕೈ ಸೇರಿದೆ. ಅಲ್ಲದೇ ವೈಯಕ್ತಿಕವಾಗಿ ಕಿಚ್ಚ ಸುದೀಪ್ 10 ಲಕ್ಷ ರೂಪಾಯಿ ಗೆದ್ದಿದ್ದಾರೆ.

- Advertisement -

Latest News

error: Content is protected !!