Thursday, June 25, 2026
Homeಕರಾವಳಿಮಂಗಳೂರುಬೆಳ್ತಂಗಡಿ : ವೇಣೂರಿನಲ್ಲಿ ಅನಧಿಕೃತ ಬ್ರೈಟ್ ಶಾಲೆಯ ಕಾಮಗಾರಿಗೆ ಬ್ರೇಕ್ ಹಾಕಿದ್ರು ಮುಂದುವರಿದ ಕಾಮಗಾರಿ

ಬೆಳ್ತಂಗಡಿ : ವೇಣೂರಿನಲ್ಲಿ ಅನಧಿಕೃತ ಬ್ರೈಟ್ ಶಾಲೆಯ ಕಾಮಗಾರಿಗೆ ಬ್ರೇಕ್ ಹಾಕಿದ್ರು ಮುಂದುವರಿದ ಕಾಮಗಾರಿ

- Advertisement -
- Advertisement -

ಬೆಳ್ತಂಗಡಿ : ಸರಕಾರಕ್ಕೆ ಲಕ್ಷಾಂತರ ರೂಪಾಯಿ ತೆರಿಗೆ ವಂಚನೆ ಮಾಡಿ ಕಾನೂನು ಬಾಹಿರವಾಗಿ ಯಾವುದೇ ಅನುಮತಿಗಳನ್ನು ಪಡೆಯದೆ ಅನಧಿಕೃತವಾಗಿ ವೇಣೂರು ಗ್ರಾಮದ ಕರಿಮಣೇಲುನಲ್ಲಿರುವ ಬ್ರೈಟ್ ಹಾರಿಜೋನ್ ಇಂಟರ್ ನ್ಯಾಷನಲ್ ಸ್ಕೂಲ್ / ಬೆಸ್ಟ್ ವಸತಿ ಶಾಲೆಯ ಕಟ್ಟಡ ನಿರ್ಮಾಣ ಮಾಡುತ್ತಿರುವ ಕಾಮಗಾರಿಯನ್ನು ಅಧಿಕಾರಿಗಳು ಬ್ರೇಕ್ ಹಾಕಿದ್ರೂ ಕೆಲಸ ಮಾತ್ರ ನಿಂತಿಲ್ಲ. ವೇಣೂರು ಗ್ರಾಮ ಪಂಚಾಯತ್ ಅಧಿಕಾರಿಗಳ ಬೆಂಬಲದಿಂದಾಗಿ ರಾಜರೋಷವಾಗಿ ಕಾಮಗಾರಿಯನ್ನು ಮುಂದುವರಿಸಿದ್ದಾರೆ.

ಬೆಳ್ತಂಗಡಿ ಕಾರ್ಯನಿರ್ವಾಹಕ ಅಧಿಕಾರಿ ಭವಾನಿ ಶಂಕರ್ ನೇತೃತ್ವದಲ್ಲಿ ವೇಣೂರು ಗ್ರಾಮದ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ತಂಡದ ಅಧಿಕಾರಿಗಳು ವೇಣೂರು ಗ್ರಾಮದ ಕರಿಮಣೇಲುನಲ್ಲಿರುವ ಸರ್ವೆ ನಂಬರ್ 125/2A,125/2B2,155/1C2,155/1B ರಲ್ಲಿ  ಬ್ರೈಟ್ ಹಾರಿಜೋನ್ ಇಂಟರ್ ನ್ಯಾಷನಲ್ ಸ್ಕೂಲ್ / ಬೆಸ್ಟ್ ವಸತಿ ಶಾಲೆಯ ಅನಧಿಕೃತ ಕಟ್ಟಡದ ಕಾಮಗಾರಿಯನ್ನು ಜ.14 ರಂದು ನಿಲ್ಲಿಸಿ ಸಕ್ಷಮ ಪ್ರಾಧಿಕಾರದಿಂದ ಎಚ್ಚರಿಕೆ ಟೇಪ್ ಅಳವಡಿಸಿ ಕಾಮಗಾರಿ ಸ್ಥಳಕ್ಕೆ ಪ್ರವೇಶ ನಿರ್ಬಂಧಿಸಿ ಸ್ಥಗಿತಗೊಳಿಸಿದ್ದು. ಇದನ್ನು ಉಲ್ಲಂಘಿಸಿ ಕಾಮಗಾರಿಯನ್ನು ಪುನರ್ ಆರಂಭಿಸಿದಲ್ಲಿ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993 ರ ಪ್ರಕಾರ ಹಾಗೂ ಅಕ್ರಮ ಕಟ್ಟಡಗಳನ್ನು ನಿರ್ಬಂಧಿಸುವ ಬಗ್ಗೆ ಮಾನ್ಯ ಸರ್ವೋಚ್ಚ ನ್ಯಾಯಾಲಯದ ಮಾರ್ಗಸೂಚಿಯಂತೆ ಮತ್ತು ಕರ್ನಾಟಕ ಸರಕಾರ ಸುತ್ತೋಲೆ ಸಂಖ್ಯೆ ಆರ್.ಡಿ.ಪಿ.ಆರ್ /27/ಜಿಪಿಎ 2025 ದಿನಾಂಕ 13-05-2025 ರಂತೆ ಕಾನೂನು ಕ್ರಮವನ್ನು ಸಂಬಂಧಪಟ್ಟರವ ಮೇಲೆ ಜರುಗಿಸಲಾಗುವುದು ಎಂದು ಎಚ್ಚರಿಕೆ ಬ್ಯಾನರ್ ಹಾಕಲಾಗಿತ್ತು. ಆದ್ರೆ ಕಾಮಗಾರಿಯನ್ನು ಮತ್ತೆ 40 ರಿಂದ 50 ಮಂದಿ ಕಾರ್ಮಿಕರನ್ನು ಕರೆತಂದು ಕಾನೂನನ್ನು ಗಾಳಿಗೆ ತೂರಿ ಮುಂದುವರಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ವೇಣೂರು, ಕರಿಮಣೇಲು ಗ್ರಾಮದಲ್ಲಿ ಮೂಡಬಿದಿರೆಯ ನಿವಾಸಿ ಡಾ.ಶರತ್ ಗೋರೆ ಎಂಬವರ ಮಾಲೀಕತ್ವದ “ಬ್ರೈಟ್ ಹಾರಿಜೋನ್ ಇಂಟರ್ ನ್ಯಾಷನಲ್ ಸ್ಕೂಲ್/ಬೆಸ್ಟ್ ವಸತಿ ಶಾಲೆ ಎಂಬ ಹೆಸರಿನಲ್ಲಿ ಅನಧಿಕೃತವಾಗಿ ಬೃಹತ್ ಮಹಡಿಯನ್ನು ನಿರ್ಮಾಣ ಕಾಮಗಾರಿ ಕೆಲಸ ಮಾಡುತ್ತಿದ್ದರು.ಈ ಅಕ್ರಮ ಕಟ್ಟಡ ಕಾಮಗಾರಿಯ ಮಾಡುತ್ತಿರುವ ಬಗ್ಗೆ ತಕ್ಷಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮತ್ತು ವೇಣೂರು ಅಭಿವೃದ್ಧಿ ಅಧಿಕಾರಿಗಳಿಗೆ ಜ.12 ರಂದು ಲಿಖಿತ ಪತ್ರದ ಮೂಲಕ ದೂರು ಸಲ್ಲಿಸಿದ್ದರು.

ವೇಣೂರು ಗ್ರಾಮ ಪಂಚಾಯತ್ ಪಿಡಿಒ, ಕಾರ್ಯದರ್ಶಿಗಳ ಬೆಂಬಲದಿಂದ ಕಾಮಗಾರಿ ಕೆಲಸವನ್ನು ಕಟ್ಟಡ ಮಾಲೀಕರು ಕಾನೂನು ಮೀರಿ ರಾಜರೋಷವಾಗಿ ಮುಂದುವರಿಸಿದ್ದಾರೆ ಎಂಬ ಆರೋಪಗಳು ಕೇಳಿ ಬರುತ್ತಿದೆ. ಕಾನೂನು ಮೀರಿ ಕೆಲಸ ಮಾಡುತ್ತಿರುವ ಬಗ್ಗೆ ಅಧಿಕಾರಿಗಳಲ್ಲಿ ಜ.19 ರಂದು ಕರೆ ಮಾಡಿ ವಿಚಾರವನ್ನು ತಿಳಿಸಿದ್ರೆ ಕಾಮಗಾರಿ ಕೆಲಸ ಮಾಡುವ ಮಾಲೀಕರಿಗೆ ಅಧಿಕಾರಿಗಳೆ ಮಾಹಿತಿ ನೀಡಿ ಕಾರ್ಮಿಕರನ್ನು ಕೆಲಸ ಮಾಡುವ ಸ್ಥಳದಿಂದ ಬೇರೆಡೆಗೆ ಕರೆದುಕೊಂಡು ಹೋಗುವಂತೆ ಮಾಡಿದ್ದಾರೆ.

- Advertisement -

Latest News

error: Content is protected !!