Thursday, June 4, 2026
Homeತಾಜಾ ಸುದ್ದಿಕಾಲಿವುಡ್ ನಟ ವಿಶಾಲ್ ವಿರುದ್ಧ ಕನ್ನಡದ ಖ್ಯಾತ ನಟಿಯಿಂದ ಲೈಂಗಿಕ ಕಿರುಕುಳ ಆರೋಪ

ಕಾಲಿವುಡ್ ನಟ ವಿಶಾಲ್ ವಿರುದ್ಧ ಕನ್ನಡದ ಖ್ಯಾತ ನಟಿಯಿಂದ ಲೈಂಗಿಕ ಕಿರುಕುಳ ಆರೋಪ

- Advertisement -
- Advertisement -

ಬೆಂಗಳೂರು: ಕಾಲಿವುಡ್ ನ ನಟ ವಿಶಾಲ್ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು  ಕನ್ನಡದ ‘ಮನಸೆಲ್ಲಾ ನೀನೆ’ ಸಿನಿಮಾದಲ್ಲಿ ನಟಿಸಿರುವ ನಟಿ ಗಾಯತ್ರಿ ರಘುರಾಮ್ ಗಂಭೀರ ಆರೋಪ ಮಾಡಿದ್ದಾರೆ.

ವಿಶಾಲ್ ಹಾಗೂ ಆತನ ಗೆಳೆಯರು ಹಲವಾರು ನಟಿಯರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.

ಸರಣಿ ಟ್ವೀಟ್ ಮಾಡಿರುವ ಅವರು, ‘ವಿಶಾಲ್ ಹಾಗೂ ಗೆಳೆಯರು ಚಿತ್ರೋದ್ಯಮಕ್ಕೆ ಬರುವ ಹೊಸ ನಟಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಬಳಸಿಕೊಂಡು ಬಿಸಾಡುವ ಪ್ರವೃತ್ತಿ ಇವರದ್ದು’ ಎಂದಿದ್ದಾರೆ.

‘ಚಿತ್ರರಂಗದಲ್ಲಿ ಇರುವ ವ್ಯಕ್ತಿಯಾಗಿ ಮೊದಲಿಗೆ ಲೈಂಗಿಕ ದೌರ್ಜನ್ಯದ ವಿರುದ್ಧ ದನಿ ಎತ್ತಬೇಕು. ವಿಶಾಲ್ ಒಮ್ಮೆ ನಿನ್ನ ಸುತ್ತಲೂ ನೋಡು ಏನಾಗುತ್ತಿದೆ ಎಂದು. ಹೊಸದಾಗಿ ಚಿತ್ರರಂಗಕ್ಕೆ ಬರುತ್ತಿರುವ ನಟಿಯರ ಸ್ಥಿತಿ ಹೇಗಿದೆಯೆಂದು. ನಟಿಯರ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ನೋಡು. ನೀನು ಮತ್ತು ನಿನ್ನ ಗೆಳೆಯರು ಅದೇ ವಿಭಾಗಕ್ಕೆ ಸೇರಿದವರು. ಬಳಸಿ ಬಿಸಾಡುವುದು ನಿಮಗೆ ಅಭ್ಯಾಸವಾಗಿ ಹೋಗಿದೆ. ಸಾಕಷ್ಟು ಮಂದಿ ನಟಿಯರು ನಿಮ್ಮಿಂದ ತೊಂದರೆ ಅನುಭವಿಸಿದ್ದಾರೆ’ ಎಂದಿದ್ದಾರೆ.

ಅಲ್ಲದೇ ‘ನೀನು ಪದೇ-ಪದೇ ಪೀಡಿಸುವ ಕಾರಣದಿಂದ ನಾಯಕ ನಟಿಯರು ನಿನ್ನಿಂದ ದೂರ ಓಡುತ್ತಾರೆ. ಈ ವಿಷಯ ನಿನಗೆ ಗೊತ್ತಿದೆಯೇ?’ ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ ‘ಸಿನಿಮಾ ರಂಗದ ಯುವತಿಯರನ್ನು ಕಾಪಾಡಲು ನೀನು ನಿನ್ನ ಹೀರೋತನ ಪ್ರದರ್ಶಿಸಬೇಕಿತ್ತು. ಆದರೆ ನೀನು ವಿಲನ್‌ ನಂತೆ ವರ್ತಿಸಿದೆ’ ಎಂದಿದ್ದಾರೆ.

- Advertisement -

Latest News

error: Content is protected !!