Thursday, June 4, 2026
Homeಕರಾವಳಿಮಂಗಳೂರು; ಡಿವೈಡರ್ ನಲ್ಲಿ ನಿಂತು ಚಾಕು ಹಿಡಿದು ಸಾರ್ವಜನಿಕರನ್ನು ಹೆದರಿಸುತ್ತಿದ್ದ ಗಾಂಜಾ ವ್ಯಸನಿ ಅರೆಸ್ಟ್

ಮಂಗಳೂರು; ಡಿವೈಡರ್ ನಲ್ಲಿ ನಿಂತು ಚಾಕು ಹಿಡಿದು ಸಾರ್ವಜನಿಕರನ್ನು ಹೆದರಿಸುತ್ತಿದ್ದ ಗಾಂಜಾ ವ್ಯಸನಿ ಅರೆಸ್ಟ್

- Advertisement -
- Advertisement -

ಮಂಗಳೂರು; ಡಿವೈಡರ್ ನಲ್ಲಿ ನಿಂತು ಚಾಕು ಹಿಡಿದು ಸಾರ್ವಜನಿಕರನ್ನು ಹೆದರಿಸುತ್ತಿದ್ದ ಗಾಂಜಾ ವ್ಯಸನಿಯನ್ನು ಪೊಲೀಸರು ಸಿನಿಮೀಯ ಶೈಲಿಯಲ್ಲಿ ಅರೆಸ್ಟ್ ಮಾಡಿದ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಉಳ್ಳಾಲ ಮುಕ್ಕಚ್ಚೇರಿ ಕೈಕೋ ನಿವಾಸಿ ಅಬೂಬ್ಬಕರ್ ಸಿದ್ದೀಖ್‌( 24) ಬಂಧಿತ ಆರೋಪಿ.

ಅಬೂಬ್ಬಕರ್ ಸಿದ್ದೀಖ್‌ ಗಾಂಜಾ ಸೇವಿಸಿ ಬೈಕಿನಲ್ಲಿ ಯದ್ವಾತದ್ವಾ ಓಡಾಡುತ್ತಿದ್ದ. ಅಲ್ಲದೇ ಕೈಯಲ್ಲಿ ಚೂರಿ ಮತ್ತು ಕಲ್ಲು ಹಿಡಿದುಕೊಂಡು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿದ್ದ. ಸ್ಥಳೀಯರು ಕೊಣಾಜೆ ಠಾಣಾ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದು, ಸ್ಥಳಕ್ಕಾಗಮಿಸಿದ್ದ ನಿವೃತ್ತ ಯೋಧ ಸಂತೋಷ್ ಹಿಂಬದಿಯಿಂದ ಲಾಕ್ ಮಾಡಿ ಸಿದ್ದೀಖ್ ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ವೇಳೆ ಠಾಣಾ ಸಿಬ್ಬಂದಿ ಇನ್ನೋರ್ವ ನಿವೃತ್ತ ಯೋಧ ಪೂರ್ಣೇಶ್ ಹಾಗೂ ಇನ್ನೋರ್ವರು ಸಿಬ್ಬಂದಿ ಭಾಗಿಯಾಗಿದ್ದರು.ಘಟನೆ ಕುರಿತ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

- Advertisement -

Latest News

error: Content is protected !!