Thursday, June 4, 2026
Homeಚಿಕ್ಕಮಗಳೂರುಚಿಕ್ಕಮಗಳೂರು; ಕಾಫಿ ತೋಟದಲ್ಲಿ ಜಿಂಕೆ ಬೇಟೆಯಾಡಿ ಪಾರ್ಟಿ ಮಾಡುತ್ತಿದ್ದಾಗ ಅರಣ್ಯಾಧಿಕಾರಿಗಳಿಂದ ದಾಳಿ; ಆರು ಮಂದಿ ಆರೋಪಿಗಳ...

ಚಿಕ್ಕಮಗಳೂರು; ಕಾಫಿ ತೋಟದಲ್ಲಿ ಜಿಂಕೆ ಬೇಟೆಯಾಡಿ ಪಾರ್ಟಿ ಮಾಡುತ್ತಿದ್ದಾಗ ಅರಣ್ಯಾಧಿಕಾರಿಗಳಿಂದ ದಾಳಿ; ಆರು ಮಂದಿ ಆರೋಪಿಗಳ ಬಂಧನ

- Advertisement -
- Advertisement -

ಚಿಕ್ಕಮಗಳೂರು; ಕಾಫಿ ತೋಟದಲ್ಲಿ ಜಿಂಕೆ ಬೇಟೆಯಾಡಿ ಪಾರ್ಟಿ ಮಾಡುತ್ತಿದ್ದಾಗ ಅರಣ್ಯಾಧಿಕಾರಿಗಳು ದಾಳಿ ಮಾಡಿ ಆರು ಮಂದಿ ಆರೋಪಿಗಳನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಮೇಲಿನ ಹುಲುವತ್ತಿ ಗ್ರಾಮದ ಅರಣ್ಯ ವ್ಯಾಪ್ತಿಯ ಸಂಗಮ ಕಾಫಿ ತೋಟದಲ್ಲಿ ನಡೆದಿದೆ.

ಸಂಗಮ ಕಾಫಿ ತೋಟದಲ್ಲಿ ಸುಮಾರು 25 ಕೆ ಜಿ ತೂಕದ ಜಿಂಕೆಯನ್ನು ಬೇಟೆಯಾಡಿ ಬಾಡೂಟಕ್ಕೆ ತಯಾರಿ ನಡೆಸುತ್ತಿದ್ದಾಗ ಅಧಿಕಾರಿಗಳು ರೈಡ್  ಮಾಡಿದ್ದಾರೆ.ಶಿಕಾರಿ ಮಾಡಿ ಅಲ್ಲೇ ಬಾಡೂಟ ಮಾಡಿದ ಬಗ್ಗೆ ಸ್ಥಳೀಯರಿಂದ ಅರಣ್ಯಾಧಿಕಾರಿಗಳಿಗೆ ಮಾಹಿತಿ‌ ಬಂದ ಹಿನ್ನೆಲೆ ದಾಳಿ ಮಾಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಮೊಹಮ್ಮದ್ ಶಕೀಲ್ ಸೇರಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ. ಬಂಧಿತರಿಂದ 8 ಕೆ.ಜಿ. ಜಿಂಕೆ ಮಾಂಸದ ಜೊತೆಗೆ ನಾಡ  ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ. ಇನ್ನು ಪಾರ್ಟಿ ಸ್ಥಳದಲ್ಲಿ ಎನ್.ಜಿ.ಓ ಸದಸ್ಯರಿದ್ದರು ಎನ್ನುವ ಆರೋಪ ಕೇಳಿ ಬಂದಿದೆ.

- Advertisement -

Latest News

error: Content is protected !!