Saturday, June 6, 2026
HomeUncategorizedಒಂದು ಕೊಲೆಯನ್ನು ಮುಚ್ಚಿಹಾಕಲು ಒಂಬತ್ತು ಜನರನ್ನು ಕೊಂದ ಭೂಪ!.. ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿದ ವಾರಂಗಲ್‌...

ಒಂದು ಕೊಲೆಯನ್ನು ಮುಚ್ಚಿಹಾಕಲು ಒಂಬತ್ತು ಜನರನ್ನು ಕೊಂದ ಭೂಪ!.. ಅಪರಾಧಿಗೆ ಗಲ್ಲು ಶಿಕ್ಷೆ ವಿಧಿಸಿದ ವಾರಂಗಲ್‌ ಕೋರ್ಟ್

- Advertisement -
- Advertisement -

ಹೈದರಾಬಾದ್‌: ಬಿಹಾರದಿಂದ ವಾರಂಗಲ್‌ಗೆ ವಲಸೆ ಬಂದಿದ್ದ ವ್ಯಕ್ತಿಯೋರ್ವ ಇದೇ ಪ್ರದೇಶಕ್ಕೆ ಪಶ್ಚಿಮ ಬಂಗಾಳದಿಂದ ವಲಸೆ ಬಂದಿದ್ದ ಕುಟುಂಬದ16 ವರ್ಷದ ಬಾಲಕಿಯ ಜೊತೆ ಸಲುಗೆ ಬೆಳೆಸಿ, ಅತ್ಯಾಚಾರ ಎಸಗಿದ್ದು ಆಕೆಯನ್ನು ಕೊಂದುಹಾಕಿದ್ದ. ಒಂದು ಕೊಲೆಯನ್ನು ಮುಚ್ಚಿಹಾಕಲು ಒಂಬತ್ತು ಜನರನ್ನು ಬಾವಿಗೆ ನೂಕಿ ಭೀಕರವಾಗಿ ಕೊಲೆ ಮಾಡಿದ್ದ ಆರೋಪಿಗೆ ತೆಲಂಗಾಣದ ವಾರಂಗಲ್‌ ಕೋರ್ಟ್‌ ಗಲ್ಲು ಶಿಕ್ಷೆ ವಿಧಿಸಿದೆ.

10 ಜನರನ್ನು ಕೊಲೆ ಮಾಡಿದ್ದಲ್ಲದೇ ಬಾಲಕಿ ಮೇಲೆ ಅತ್ಯಾಚಾರ ಎಸಗಿದ್ದರಿಂದ ಆರೋಪಿಗೆ ಮರಣದಂಡನೆ ವಿಧಿಸಬೇಕೆಂಬ ಪ್ರಾಸಿಕ್ಯೂಷನ್‌ ವಾದವನ್ನು ಕೋರ್ಟ್‌ ಪರಿಗಣಿಸಿತ್ತು.24 ವರ್ಷದ ಸಂಜಯ್‌ ಕುಮಾರ್‌ ಯಾದವ್ ಮರಣದಂಡನೆಗೆ ಗುರಿಯಾದ ಆರೋಪಿ ‌. ಕಳೆದ ಮಾರ್ಚ್‌ನಲ್ಲಿ ಒಂದು ಹಾಗೂ ಮೇನಲ್ಲಿ 10 ಕೊಲೆ ಎಸಗಿದ್ದ. ಸಂಜಯ್‌ ಆರು ವರ್ಷಗಳ ಹಿಂದೆ ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನುರೈಲಿನಲ್ಲಿ ಪಶ್ಚಿಮ ಬಂಗಾಳಕ್ಕೆ ಕರೆದೊಯ್ಯುತ್ತಿದ್ದ. ನಂತರ ಆಕೆಗೆ ನಿದ್ದೆ ಮಾತ್ರೆಗಳನ್ನು ಬೆರೆಸಿದ್ದ ಮಜ್ಜಿಗೆ ನೀಡಿ ಬಳಿಕ ಚಲಿಸುವ ರೈಲಿನಿಂದ ಕೆಳಕ್ಕೆ ನೂಕಿ ಸಾಯಿಸಿದ್ದ.

ಮಹಿಳೆಯ ಕುಟುಂಬ ಸದಸ್ಯರು,ಪೊಲೀಸರಿಗೆ ದೂರು ನೀಡುವುದನ್ನು ತಪ್ಪಿಸಲು ಸಂಜಯ್‌, ಆ ಕುಟುಂಬದ ಆರು ಸದಸ್ಯರು ಸೇರಿ ಒಟ್ಟು 9 ಮಂದಿಗೆ ಮಂಪರು ಬರುವ ಮಾತ್ರೆ ನೀಡಿ, ಒಬ್ಬೊಬ್ಬರನ್ನು ಬಾವಿಗೆ ತಳ್ಳಿ ಸಾಯಿಸಿದ್ದ. ವಿಶೇಷ ಪೊಲೀಸ್‌ ತಂಡದ ತನಿಖೆಯಿಂದ ಪ್ರಕರಣ ಬೆಳಕಿಗೆ ಬಂದಿತ್ತು.

- Advertisement -

Latest News

error: Content is protected !!